ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಲ ಸೌಕರ್ಯಗಳಿಲ್ಲದೇ ಟೋಲ್ ವಸೂಲಿ..!

ಧಾರವಾಡ: ಧಾರವಾಡ ತಾಲೂಕಿನ ಮರೇವಾಡ ಬಳಿ ಧಾರವಾಡ-ಸವದತ್ತಿ ಜಿಲ್ಲಾ ಮುಖ್ಯ ರಸ್ತೆ (ರಾಜ್ಯ ಹೆದ್ದಾರಿ)ಯಲ್ಲಿರುವ ಟೋಲ್ ಪ್ಲಾಜಾದಲ್ಲಿ ಪ್ರಯಾಣಿಕರಿಗೆ ಯಾವುದೇ ಮೂಲ ಸೌಕರ್ಯಗಳಿಲ್ಲದೇ ಇದು ಕೇವಲ ಹಣ ವಸೂಲಿ ಮಾಡುವ ಟೋಲ್ ಆಗಿದೆ ಎಂದು ಅಮ್ಮಿನಬಾವಿ ಕ್ಷೇತ್ರದ ನಿಕಟಪೂರ್ವ ತಾಲೂಕು ಪಂಚಾಯ್ತಿ ಸದಸ್ಯ ಸುರೇಂದ್ರ ದೇಸಾಯಿ ಆರೋಪಿಸಿದ್ದಾರೆ.

ವಾಹನಗಳು ಅಪಘಾತರಹಿತ ಸುರಕ್ಷಿತವಾಗಿ ಚಲಿಸಲು ಒಳ ಬರುವ ಹಾಗೂ ಹೊರ ಹೋಗುವ ಸಿಗ್ನಲ್ ದೀಪಗಳಿಲ್ಲ. ಟೋಲ್ ಎರಡೂ ಬದಿಗಳ ರಸ್ತೆ ಸಂಪೂರ್ಣ ಹಾಳಾಗಿದ್ದು, ಅದು ಹಲವಾರು ತಗ್ಗು-ದಿನ್ನೆಗಳಿಂದ ಕೂಡಿದ್ದು, ವಾಹನಗಳು ಚಲಿಸಿದ ತಕ್ಷಣ ಧೂಳು ಏಳುತ್ತದೆ. ತಗ್ಗಾದ ರಸ್ತೆಗೆ ಸರಿಯಾಗಿ ಖಡಿ ಹಾಕಿ ಡಾಂಬರೀಕರಣ ಮಾಡದೇ ಇರುವುದರಿಂದ ವಾಹನ ಚಾಲಕರು ನಿತ್ಯ ಈ ಟೋಲ್ ನಿರ್ವಾಹಕರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ ಎಂದು ದೂರಿದ್ದಾರೆ.

ಟೋಲ್‍ದಲ್ಲಿ ಆಪತ್ಕಾಲಕ್ಕೆ ತುರ್ತು ಸೇವೆಗಾಗಿ ಅಂಬ್ಯುಲೆನ್ಸ್ ಸೌಲಭ್ಯವಿಲ್ಲ. ಜೊತೆಗೆ ಟೋಲ್ ಸಮೀಪ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಶೌಚಾಲಯ ವ್ಯವಸ್ಥೆಯೂ ಇಲ್ಲದಿರುವುದರಿಂದ ಲೋಕೋಪಯೋಗಿ ಇಲಾಖೆಯು ಮೂಲ ಸೌಕರ್ಯಗಳಿಲ್ಲದ ಈ ಟೋಲ್‍ಗೆ ಪರವಾನಗಿ ಕೊಟ್ಟಿದ್ದೂ ಸಹ ಅಕ್ರಮವಾಗಿದೆ. ಯಾವುದೇ ಮೂಲ ಸೌಕರ್ಯ ಅಭಿವೃದ್ಧಿ ಇಲ್ಲದ ಈ ಟೋಲ್ ಕೇವಲ ಹಣ ವಸೂಲಿಯ ಮೂಲಕ ಪ್ರಯಾಣಿಕರ ಸುಲಿಗೆ ಮಾಡುತ್ತಿದೆ. ಕೂಡಲೇ ಸಂಬಂಧಪಟ್ಟ ಇಲಾಖೆಯ ಮೇಲಾಧಿಕಾರಿಗಳು ಹಾಗೂ ಗುತ್ತಿಗೆದಾರರು ಸ್ಥಳಕ್ಕೆ ಭೇಟಿ ನೀಡಿ ಇಲ್ಲಿಯ ಎಲ್ಲ ನ್ಯೂನತೆಗಳನ್ನು ಸರಿಪಡಿಸದಿದ್ದರೆ ಟೋಲ್ ಸಂಗ್ರಹ ಕಾರ್ಯವನ್ನು ನಿಲುಗಡೆ ಮಾಡಿಸಲು ಹೋರಾಟ ಆರಂಭಿಸಬೇಕಾಗುತ್ತದೆ ಎಂದೂ ಸುರೇಂದ್ರ ದೇಸಾಯಿ ಎಚ್ಚರಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

10/01/2022 09:42 pm

Cinque Terre

6.25 K

Cinque Terre

0

ಸಂಬಂಧಿತ ಸುದ್ದಿ