ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅದೃಶ್ಯನಿಗೆ ಶೌರ್ಯ ಪ್ರಶಸ್ತಿ ನೀಡಿ

ಧಾರವಾಡ: ಧಾರವಾಡದಲ್ಲಿ 2019 ರಲ್ಲಿ ನಡೆದ ಕಟ್ಟಡ ದುರಂತದಲ್ಲಿ 9 ಜನರ ಪ್ರಾಣ ರಕ್ಷಣೆ ಮಾಡಿದ ಅದೃಶ್ಯ ಸಲಕಿನಕೊಪ್ಪ ಎಂಬ ಯುವಕನಿಗೆ ಶೌರ್ಯ ಪ್ರಶಸ್ತಿ ನೀಡುವಂತೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ಹಾಗೂ ಧಾರವಾಡದ ಕೆಲ ನಾಗರಿಕರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಮೌನ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಐದು ಅಂತಸ್ತಿನ ಮಹಡಿ ಕುಸಿದು ಬಿದ್ದಾಗ ಅದೃಶ್ಯ ಅವರು ತಮ್ಮ ಪ್ರಾಣವನ್ನೂ ಲೆಕ್ಕಿಸದೇ 9 ಜನರ ಪ್ರಾಣವನ್ನು ರಕ್ಷಿಸಿದ್ದರು. ಅಂದಿನ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರೂ ಅದೃಶ್ಯ ಅವರ ಕೆಲಸವನ್ನು ಮೆಚ್ಚಿದ್ದರು. ಹೀಗಾಗಿ ಪ್ರಸಕ್ತ ರಾಜ್ಯ ಸರ್ಕಾರ ಅದೃಶ್ಯ ಅವರಿಗೆ ಜ.26 ರಂದು ಶೌರ್ಯ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಒತ್ತಾಯಿಸಿದರು.

Edited By : PublicNext Desk
Kshetra Samachara

Kshetra Samachara

10/01/2022 05:43 pm

Cinque Terre

5.66 K

Cinque Terre

0

ಸಂಬಂಧಿತ ಸುದ್ದಿ