ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಮಿಲಿಟರಿ ಸೇರಬೇಕೇ? ಹಾಗಾದರೆ ಪಡೆಯಿರಿ ಉಚಿತ ತರಬೇತಿ

ಧಾರವಾಡ: ಭಾರತೀಯ ಸೈನ್ಯಕ್ಕೆ ಸೇರಲು ಇಚ್ಚಿಸುವ ಧಾರವಾಡ ಜಿಲ್ಲೆಯ ಯುವಕರಿಗೆ ಗ್ರಾಮ ವಿಕಾಸ ತಂಡ ಹಾಗೂ A.S.T.R.A.(Armedforces Selection Training readiness Academy) ಇವರ ಸಂಯುಕ್ತ ಆಶ್ರಯದಲ್ಲಿ ಧಾರವಾಡ ತಾಲೂಕಿನ ಕೊಟಬಾಗಿ ಗ್ರಾಮದ ಶಾಲಾ ಆವರಣದಲ್ಲಿ 60 ದಿನಗಳ ಉಚಿತ ಸೇನಾ ಭರ್ತಿ ತರಬೇತಿಯನ್ನು ನೀಡಲಾಗುತ್ತಿದೆ.

ಅಕ್ಟೋಬರ್ 26 ರಿಂದ ಈ ಉಚಿತ ತರಬೇತಿ ಆರಂಭವಾಗಲಿದೆ. ಪ್ರತಿದಿನ ಬೆಳಿಗ್ಗೆ 6 ರಿಂದ 8 ರವರೆಗೆ

(ಶನಿವಾರ ಮತ್ತು ರವಿವಾರ ಬೆಳಿಗ್ಗೆ 6 ರಿಂದ ಸಂಜೆ 5 ಗಂಟೆಯವರೆಗೆ) ತರಬೇತಿ ನೀಡಲಾಗುತ್ತಿದೆ.

ತರಬೇತಿ ಪಡೆಯಲು ಅರ್ಹತೆಗಳು: ಕನಿಷ್ಠ ವಿದ್ಯಾರ್ಹತೆ SSLC ಆಗಿರಬೇಕು. ಕನಿಷ್ಠ 45%.ಅಂಕ ಪಡೆದಿರಬೇಕು. ಕನಿಷ್ಠ 168cm ಎತ್ತರ ಇರಬೇಕು.

ಎದೆಯ ಸುತ್ತಳತೆ 77cm ಇರಬೇಕು. ವಯಸ್ಸು 17 ವರ್ಷದಿಂದ 21 ವಯಸ್ಸಿನವರಾಗಿರಬೇಕು.

ಆಸಕ್ತ ಅಭ್ಯರ್ಥಿಗಳು ಸಂತೋಷ ಹಣ್ಣಿಕೇರಿ (7795091008) ಅವರನ್ನು ಸಂಪರ್ಕಿಸಬಹುದು.

Edited By : PublicNext Desk
Kshetra Samachara

Kshetra Samachara

25/10/2021 09:32 pm

Cinque Terre

2.25 K

Cinque Terre

0

ಸಂಬಂಧಿತ ಸುದ್ದಿ