ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಅಮ್ಮಿನಬಾವಿಯಲ್ಲಿ ವೀರಭದ್ರ ವಿಜಯ ಚಿಂತನಗೋಷ್ಠಿ

ಧಾರವಾಡ: ಮಾನವನ ಜೀವನ ವಿಧಾನದಲ್ಲಿ ಶೂರತ್ವ-ಧೀರತ್ವದ ಜಾಗೃತ ಭಾವುಕತನ, ಶುಭಕರವಾದ ಶ್ರೇಯಸ್ಸು, ಯಶಸ್ಸನ್ನುಂಟು ಮಾಡುವಲ್ಲಿ ಬದುಕಿನ ಸುರಕ್ಷತೆ ಮತ್ತು ಶ್ರೇಷ್ಠತೆಯ ಶಕ್ತಿ ಸಂಚಯವೇ ಶ್ರೀವೀರಭದ್ರ ಎಂದು ಇನಾಂಹೊಂಗಲ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.

ಅವರು ಧಾರವಾಡ ತಾಲೂಕಿನ ಹಾರೋಬೆಳವಡಿ ಗ್ರಾಮದ ವೀರಭದ್ರೇಶ್ವರ ದೇವಾಲಯದ ಪ್ರಾಂಗಣದಲ್ಲಿ ಕರ್ನಾಟಕ ರಾಜ್ಯ ವೀರಭದ್ರೇಶ್ವರ ಪ್ರಚಾರ ಸಮಿತಿಯ ಜಿಲ್ಲಾ ಘಟಕವು ಹಮ್ಮಿಕೊಂಡಿದ್ದ ವೀರಭದ್ರ ವಿಜಯ ಚಿಂತನ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಮೂಲವನ್ನು ಮರೆತು ಥಳಕು ಬಳಕುಗಳಿಗೆ ಬಲಿಯಾಗಿ ನಮ್ಮೊಳಗಿನ ಅಂತಃಸತ್ವವನ್ನು ಮರೆಯುತ್ತಿದ್ದೇವೆ. ಹಾಗಾಗಿ ನಮಗೆಲ್ಲ ಮೂಲವಾಗಿರುವ ವೀರಭದ್ರನ ಸ್ಮರಣೆಗೆ ನಿತ್ಯವೂ ತೆರೆದುಕೊಳ್ಳೋಣ ಎಂದರು.

ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ರಾಜ್ಯ ವೀರಭದ್ರೇಶ್ವರ ಪ್ರಚಾರ ಸಮಿತಿಯ ರಾಜ್ಯ ಉಪಾಧ್ಯಕ್ಷ ಡಾ.ಗುರುಮೂರ್ತಿ ಯರಗಂಬಳಿಮಠ ಮಾತನಾಡಿ, ವ್ಯಷ್ಟಿಯನ್ನಳಿದು ಸಮಷ್ಟಿ ಭಾವ ಸಂಪನ್ನತೆಯನ್ನು ರೂಢಿಸಿಕೊಂಡು ಸಮಾಜಮುಖಿ ಬದುಕಿಗೆ ಬೆಳಕು ತುಂಬುವ ವ್ಯಾಪಕ ಆಶಯವೇ ವೀರಭದ್ರ ಅವತಾರದ ಹಿಂದಿರುವ ಸತ್ಯಾಂಶವಾಗಿದೆ. ವೀರಭದ್ರ ದೇವರ ಅವತಾರ ಒಂದು ವಿಶಿಷ್ಟ ಶಕ್ತಿಯಾಗಿದ್ದು, ಮನುಕುಲವು ಸತ್ಯ-ನಿಷ್ಠೆಯ ಅನುಸಂಧಾನದೊಂದಿಗೆ ಸಾತ್ವಿಕ ಚೈತನ್ಯದ ಮಹಾಬೆಳಗಿನಲ್ಲಿ ಸಾಕ್ಷಾತ್ಕಾರ ಸಂಪಾದನೆಗೆ ವೀರಭದ್ರನು ಬೆಳಕು ತುಂಬುತ್ತಾನೆ ಎಂದರು.

ಕರ್ನಾಟಕ ರಾಜ್ಯ ವೀರಭದ್ರೇಶ್ವರ ಪ್ರಚಾರ ಸಮಿತಿಯ ರಾಜ್ಯ ಸಂಚಾಲಕ ಗಿರೀಶಕುಮಾರ ಬುಡರಕಟ್ಟಿಮಠ ಹಾಗೂ ಮಾಜಿ ಮಂಡಳ ಪಂಚಾಯತಿ ಸದಸ್ಯ ವಿರೂಪಾಕ್ಷಪ್ಪ ಜಕ್ಕಣ್ಣವರ ಮಾತನಾಡಿದರು.

Edited By : PublicNext Desk
Kshetra Samachara

Kshetra Samachara

21/10/2021 09:46 pm

Cinque Terre

6.08 K

Cinque Terre

0

ಸಂಬಂಧಿತ ಸುದ್ದಿ