ಶಿಗ್ಗಾಂವ- ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ, ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲ್ಲೂಕಿನ ಕುನ್ನೂರ ಗ್ರಾಮದಲ್ಲಿ ಯುವಕರು ಸೇರಿಕೊಂಡು ಸ್ವಚ್ಛ ಸುಂದರ ಗ್ರಾಮ ಮಾಡಲು ಮುಂದಾಗಿದ್ದಾರೆ.
ಕುನ್ನೂರ ಗ್ರಾಮದ ಕಲ್ಮೇಶ್ವರ ದೇವಸ್ಥಾನದ ಮುಂಬಾಗಾದಲ್ಲಿರುವ ಕೆರೆಯ ಕಟ್ಟೆಯಲ್ಲಿ ಮುಳ್ಳು ಕಂಟಿಗಳು ಹೆಚ್ಚಾಗಿ ಬೆಳೆದಿದ್ದು, ದನ ಕರುಗಳಿಗೆ ನೀರು ಕುಡಿಯಲು ಸಹ ಹೋಗಲು ಆಗುತ್ತಿರಲಿಲ್ಲ. ಇದರಿಂದ ರೈತರಿಗೆ ತುಂಬ ತೊಂದರೆ ಆಗಿತ್ತು. ಇದನ್ನು ಮನಗಂಡ ಗ್ರಾಮದ ಚನ್ನವೀರಸ್ವಾಮಿ ಹೀರೆಮಠ, ಸಿದ್ಧಾರೂಢ, ರಬ್ಬಾನಿ, ಜೈಲಾನಿ ಮತ್ತೆಖಾನ, ಗ್ರಾ.ಪಂ.ಅಧ್ಯಕ್ಷ ಮಹೇಶ ಚಿಕ್ಕವೀರಮಠ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ನಾಗರಾಜ ನಡಗೇರಿ, ಫಕ್ಕಿರೇಶ ಕೊಟಗಾರ, ಯಲ್ಲಪ್ಪ ಬಾರ್ಕಿ, ಸಹದೇವಪ್ಪ ಬೀರವಳ್ಳಿ ಸೇರಿದಂತೆ ಯುವಕರು ಹಿರಿಯರು ಸೇರಿಕೊಂಡು ಕೆರೆಯ ಕಟ್ಟೆಯ ಮೇಲೆ ಬೆಳದಿದ್ದ ಮುಳ್ಳು ಕಂಟಿಗಳನ್ನು ತೆಗೆದು ಹಾಕಿ ಹಸುಗಳಿಗೆ ಅನುಕೂಲ ಮಾಡಿಕೊಟ್ಟು ರೈತರ ಮುಖದಲ್ಲಿ ಖುಷಿ ತಂದಿದ್ದಾರೆ.
Kshetra Samachara
03/10/2021 10:28 am