ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊರೊನಾಕ್ಕೆ ಬಲಿಯಾದ ಪೈಲ್ವಾನರಿಗೆ ನುಡಿ ನಮನ ಸಲ್ಲಿಸಿದ ಶಾಸಕ ಅಮೃತ

ಧಾರವಾಡ: ಕೊರೊನಾ ಮಹಾಮಾರಿಯಿಂದ ನಾಲ್ಕು ಜನ ಕರ್ನಾಟಕ ಕೇಸರಿ ಕುಸ್ತಿ ಪೈಲ್ವಾನರನ್ನು ಕಳೆದುಕೊಂಡಿದ್ದು ಬಹಳ ದುಃಖಕರ ಸಂಗತಿ ಎಂದು ಶಾಸಕ ಅಮೃತ ದೇಸಾಯಿ ಬೇಸರ ವ್ಯಕ್ತಪಡಿಸಿದರು.

ಇತ್ತೀಚೆಗೆ ಕೊರೊನಾ ಸೋಂಕಿಗೆ ಬಲಿಯಾದ ಕರ್ನಾಟಕದ ಮಾಜಿ ಕೇಸರಿ ಪೈಲ್ವಾನರಾದ ದಿ.ಬಸಣ್ಣ ಗಾಯಕವಾಡ, ದಿ.ಪೈ.ಚಂದ್ರು ಕುರವಿನಕೂಪ್ಪ, ದಿ.ಸೈಯದ್ ಮೊರಬ ಹಾಗೂ ದಿ.ಸಂಜು ಮಾನೆ ಅವರ ಸ್ಮರಣಾರ್ಥ ಶುಕ್ರವಾರ ಧಾರವಾಡದ ಜ್ಯೋತಿ ತಾಲೀಮಿನಲ್ಲಿ ಜಿಲ್ಲಾ ಕುಸ್ತಿ ಸಂಘದಿಂದ ಆಯೋಜಿಸಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ಹಿಂದೆ ಆಯೋಜಿಸಿದ್ದ ಕುಸ್ತಿ ಹಬ್ಬದಲ್ಲಿ ಅತೀ ಹೆಚ್ಚು ಉತ್ಸಾಹದಿಂದ ಓಡಾಡಿ ಕುಸ್ತಿ ಹಬ್ಬವನ್ನು ಯಶಸ್ವಿಗೊಳಿಸಿ ಧಾರವಾಡ ಜಿಲ್ಲೆಯ ಜನತೆಗೆ ಕುಸ್ತಿಯ ರಸದೌತಣ ಉಣಬಡಿಸಿದ್ದ ಕೀರ್ತಿ ಈ ನಾಲ್ಕೂ ಜನ ಪೈಲ್ವಾನರಿಗೆ ಸಲ್ಲುತ್ತದೆ. ಮುಂಬರುವ ದಿನಗಳಲ್ಲಿ ಕಿರಿಯ ಪೈಲ್ವಾನರೆಲ್ಲ ಅವರ ಹಾಕಿಕೊಟ್ಟ ಮಾರ್ಗದಲ್ಲಿ ಶ್ರದ್ಧೆ ವಹಿಸಿ ನಡೆದು ಅಂತರರಾಷ್ಟ್ರೀಯ ಮಟ್ಟದಲ್ಲಿ ಕುಸ್ತಿ ಪತಾಕೆಯನ್ನು ಹಾರಿಸಬೇಕು. ಸಾವಿಗೀಡಾದ ಪೈಲ್ವಾನರ ಕುಟುಂಬಕ್ಕೆ ಸರ್ಕಾರದಿಂದ ಅಗತ್ಯ ಸೌಲಭ್ಯ ಮಾಡಿಕೊಡಲಾಗುವುದು ಎಂದು ಶಾಸಕರು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕುಸ್ತಿ ಸಂಘದ ಅಧ್ಯಕ್ಷರಾದ ನಿಂಗರಾಜ ಅಂಗಡಿ, ಜಿನ್ನಪ್ಪ ಕುಂದಗೋಳ, ನಾಗನಗೌಡ ಪಾಟೀಲ್, ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ್, ಶ್ರೀನಿವಾಸ್ ಶಾಸ್ತ್ರೀ, ರೆಹಮಾನ್ ಹೋಳಿ, ಧಾರವಾಡ ಜಿಲ್ಲೆಯ ಜ್ಯೋತಿ ತಾಲೀಮು ಹಾಗೂ ಮಾರುತಿ ಗರಡಿ ಮನೆಯ ಮಾಜಿ ಹಾಗೂ ಹಾಲಿ ಪೈಲ್ವಾನರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

06/08/2021 05:35 pm

Cinque Terre

8.29 K

Cinque Terre

1

ಸಂಬಂಧಿತ ಸುದ್ದಿ