ಧಾರವಾಡ: ಗಾಂಧಿ ಜಯಂತಿಯಂದು ಧಾರವಾಡ ಜಿಲ್ಲಾ ಪಂಚಾಯ್ತಿಯು ಧಾರವಾಡ ತಾಲೂಕಿನ ಅಮ್ಮಿನಭಾವಿ ಗ್ರಾಮದ ಗ್ರಾಮ ಪಂಚಾಯ್ತಿ ಸೇರಿದಂತೆ ಜಿಲ್ಲೆಯ 7 ಪಂಚಾಯ್ತಿಗಳಿಗೆ 'ಗಾಂಧಿ ಗ್ರಾಮ ಪುರಸ್ಕಾರ' ನೀಡಿದೆ.
ಸಮಗ್ರ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ವಿನೂತನ ಪ್ರಯೋಗಗಳಿಗೆ ಸಂಬಂಧಿಸಿದಂತೆ ಈ ಪುರಸ್ಕಾರವನ್ನು ನೀಡಲಾಗುತ್ತದೆ.
ಧಾರವಾಡ ತಾಲೂಕಿನ ಅಮ್ಮಿನಭಾವಿ, ಹುಬ್ಬಳ್ಳಿ ತಾಲೂಕಿನ ಛಬ್ಬಿ, ಕುಂದಗೋಳ ತಾಲೂಕಿನ ಕುಬಿಹಾಳ, ನವಲಗುಂದ ತಾಲೂಕಿನ ಹೆಬ್ಬಾಳ, ಅಳ್ನಾವರ ತಾಲೂಕಿನ ಅರವಟಗಿ, ಅಣ್ಣಿಗೇರಿ ತಾಲೂಕಿನ ನಲವಡಿ ಹಾಗೂ ಕಲಘಟಗಿ ತಾಲೂಕಿನ ದುಮ್ಮವಾಡ ಗ್ರಾಮ ಪಂಚಾಯ್ತಿಗಳಿಗೆ ಧಾರವಾಡ ಜಿಲ್ಲಾ ಪಂಚಾಯ್ತಿಯು ಗಾಂಧಿ ಗ್ರಾಮ ಪುರಸ್ಕಾರ ನೀಡಿದೆ.
Kshetra Samachara
02/10/2020 04:48 pm