ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅಂಬೇಡ್ಕರ್ ಅವರ ಕಾನೂನು ಅರಿವು ಮೂಡಿಸಲು ಉಪವಾಸ ಸತ್ಯಾಗ್ರಹಕ್ಕೆ ಕುಳಿತ ಅಭಿಮಾನಿಗಳು

ಸಂವಿಧಾನ ಶಿಲ್ಪಿ ಬಿ.ಆರ್. ಅವರಿಗೆ ಪದೇ ಪದೇ ಅವಮಾನ ಮಾಡಿದ್ದಾರೆ. ಅಷ್ಟೇ ಅಲ್ಲದೇ ಅವರ ಕಾನೂನು ಅರಿವು ಕೂಡ ಯಾರಿಗೂ ತಿಳಿಯುತ್ತಿಲ್ಲವೆಂದು ಡಾ. ಬಿಆರ್ ಅಂಬೇಡ್ಕರ್ ಅವರ ಅಭಿಮಾನಿಗಳು ಇಂದು ಹುಬ್ಬಳ್ಳಿಯಲ್ಲಿ ಅಂಬೇಡ್ಕರ್ ಅವರ ಪುತ್ಥಳಿ ಮುಂದೆ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ.

ವಿಶ್ವಕ್ಕೆ ಮಾದರಿ ಸಂವಿಧಾನ ನೀಡಿದ ಮಹಾನ ವ್ಯಕ್ತಿಯ ಕುರಿತು ರಾಜಕಾರಣಿಗಳು, ಕಿಡಿಗೇಡಿಗಳು ಅಪಮಾನ ಮಾಡುತ್ತಿದ್ದಾರೆ. ಇದರಿಂದ ಅಂಬೇಡ್ಕರ್ ಅವರ ಅಭಿಮಾನಿಗಳಿಗೆ ನೋವುಂಟಾಗಿದ ಕಾರಣ ಇಂದು ಬೆಳಗ್ಗೆಯಿಂದ ಸಂಜೆ 6 ರವರೆಗೆ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದೇವೆ. ಸತ್ಯಾಗ್ರಹದ ನಂತರ ತಹಶೀಲ್ದಾರರ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆಂದು ಅಭಿಮಾನಿಗಳು ತಿಳಿಸಿದರು.

Edited By :
Kshetra Samachara

Kshetra Samachara

08/07/2022 12:57 pm

Cinque Terre

30.83 K

Cinque Terre

0

ಸಂಬಂಧಿತ ಸುದ್ದಿ