ಗ್ರಾಹಕನ ಸೋಗಿನಲ್ಲಿ ಬಂದ ಯುವಕನೋರ್ವ ಗಲ್ಲಾ ಪೆಟ್ಟಿಗೆಗೆ ಕೈ ಹಾಕಿ ಐದೂವರೆ ಸಾವಿರ ರೂಪಾಯಿ ಎಗರಿಸಿಕೊಂಡು ಪರಾರಿಯಾದ ಘಟನೆ ಧಾರವಾಡದಲ್ಲಿ ನಡೆದಿದೆ.
ಧಾರವಾಡದ ಟಿಕಾರೆ ರಸ್ತೆಯಲ್ಲಿನ ನವಭಾರತ ಅಂಗಡಿಗೆ ಗ್ರಾಹಕನ ಸೋಗಿನಲ್ಲಿ ಬಂದ ಯುವಕ ಆಕಡೆ, ಈಕಡೆ ನೋಡಿ ಯಾರೂ ಇಲ್ಲದನ್ನು ಗಮನಿಸಿ ಗಲ್ಲಾ ಪೆಟ್ಟಿಗೆಗೆ ಕೈ ಹಾಕಿ ಹಣ ಎಗರಿಸಿಕೊಂಡು ಹೋಗಿದ್ದಾನೆ. ಈ ದೃಶ್ಯ ಅಂಗಡಿಯಲ್ಲಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Kshetra Samachara
22/03/2022 02:59 pm