ಶ್ರೀರಾಮ ನವಮಿ ಉತ್ಸವ ಸಮಿತಿ ಹಾಗೂ ಎಲ್ಲ ಹಿಂದೂ ಸಂಘಟನೆಗಳ ವತಿಯಿಂದ ಶ್ರೀ ರಾಮನವಮಿ, ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಮತ್ತು ಭಗೀರಥ ಜಯಂತಿಯನ್ನು ಏ.10 ರಂದು ಆಚರಣೆ ಮಾಡಲಾಗುತ್ತಿದೆ ಎಂದು ಶ್ರೀರಾಮನವಮಿ ಉತ್ಸವ ಸಮಿತಿಯ ಉಪಾಧ್ಯಕ್ಷ ಕೃಷ್ಣಾ ಗಂಡಗಾಳೇಕರ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಅಂದು ಮಧ್ಯಾಹ್ನ 3 ಗಂಟೆಗೆ ಭಗವಾನ್ ಶ್ರೀರಾಮನ ಮತ್ತು ಭಗವಾನ್ ಹನುಮನ ದಿವ್ಯ ಮೂರ್ತಿಯ ಬೃಹತ್ ಶೋಭಾಯಾತ್ರೆಯನ್ನು ನಡೆಸಲಾಗುವುದು. ಈ ಯಾತ್ರೆ ಭಾನಿ ಓಣಿಯಿಂದ ಪ್ರಾರಂಭಗೊಂಡು ಗಣೇಶಪೇಟ ವೃತ್ತ, ಮರಾಠಗಲ್ಲಿ, ದಾಜಿಬಾನ್ ಪೇಟ್, ಕೊಪ್ಪಿಕರ ರಸ್ತೆ ಮೂಲಕ ಮತ್ತೆ ಭಾನಿ ಓಣಿಗೆ ತಲುಪಿ ಸಮಾರೋಪಗೊಳ್ಳಲಿದೆ. ನಂತರ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದರು.
ವೇದಿಕೆ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮೂರುಸಾವಿರಮಠದ ಡಾ.ಗುರುಸಿದ್ದರಾಜಯೋಗಿಂದ್ರ ಮಹಾಸ್ವಾಮಿಗಳು, ಗದಗಿನ ಸದಾಶಿವಾನಂದ ಮಹಾಸ್ವಾಮಿಗಳು, ಶಿರೂರ ಪಾರ್ಕ್ ನ ಅಯ್ಯಪ್ಪಸ್ವಾಮಿ ಮಂದಿರದ ಆನಂದ ಗುರುಸ್ವಾಮಿಗಳು ವಹಿಸಲಿದ್ದ, ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ವಿಪ ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಶಂಕರಪಾಟೀಲ ಮುನೇನಕೊಪ್ಪ ಆಗಮಿಸಲಿದ್ದು, ಅಂದು ಮುಖ್ಯ ಭಾಷಣಕಾರರಾಗಿ ಕರ್ನಾಟಕ ಪರ್ಯಾವರಣದ ಜಯರಾಮ ಬುಳ್ಳಾಜೆ ಮಾತನಾಡಲಿದ್ದಾರೆ. ಅಂದು ಕನಿಷ್ಠ ಐದು ಸಾವಿರಕ್ಕೂ ಅಧಿಕ ಜನರು ಸೇರಲಿದ್ದಾರೆ ಎಂದರು.
Kshetra Samachara
06/04/2022 03:35 pm