ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ವಿಡಿಯೋ ಕಾನ್ಫರೆನ್ಸ್ ಮೂಲಕ ರೈತರೊಂದಿಗೆ ಚರ್ಚೆ

ದೇಶಪಾಂಡೆ ಫೌಂಡೇಶನ್ ಹಾಗೂ ಎಸ್ ಬಿ ಐ ಸಹಯೋಗದಲ್ಲಿ ಉತ್ತಮ ಗುಣಮಟ್ಟದ ಬೆಳೆಗಾಗಿ ಕೃಷಿ ಹೊಂಡದ ಯೋಜನೆಯಲ್ಲಿ 1000 ಕೃಷಿ ಹೊಂಡ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಇದುವರೆಗೂ ಯಾವ ಮಟ್ಟದಲ್ಲಿ ಅನುಕೂಲ ಆಗಿದೆ ಎಂಬುದರ ಬಗ್ಗೆ ಗುರುವಾರ ತಾಲೂಕಿನ ನಾವಳ್ಳಿ ಗ್ರಾಮದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಿದ ಚರ್ಚೆಯಲ್ಲಿ ರೈತರು ತಮ್ಮ ಅನುಭವವನ್ನು ಹಂಚಿಕೊಂಡರು.

ದೇಶಪಾಂಡೆ ಫೌಂಡೇಶನ್ ಸಂಸ್ಥಾಪಕ ಗುರುರಾಜ ದೇಶಪಾಂಡೆ ಹಾಗೂ ಜಯಶ್ರೀ ದೇಶಪಾಂಡೆ ಅವರ ನೇತೃತ್ವದಲ್ಲಿ ನಡೆದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧ್ಯಕ್ಷರು ದಿನೇಶ್ ಕುಮಾರ್ ಖಾರಾ ಹಾಗೂ ಎಸ್ ಬಿ ಐ ಸಿಬ್ಬಂದಿ ವರ್ಗ, ದೇಶಪಾಂಡೆ ಪ್ರತಿಷ್ಠಾನ ಸಿಬ್ಬಂದಿ ವರ್ಗ ಮತ್ತು ನವಲಗುಂದ ತಾಲೂಕಿನ ನಾವಳ್ಳಿ ಗ್ರಾಮದ ರೈತರು ಸೇರಿದಂತೆ ತಾಲೂಕಿನ ಹಲವು ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Edited By :
Kshetra Samachara

Kshetra Samachara

17/06/2022 12:26 pm

Cinque Terre

74.76 K

Cinque Terre

0

ಸಂಬಂಧಿತ ಸುದ್ದಿ