ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

6 ತಿಂಗಳಲ್ಲಿ ಜಿ.ಐ.ಎಸ್ ಆಧಾರಿತ ಅವಳಿ ನಗರದ ಮಾಸ್ಟರ್ ಪ್ಲಾನ್ ಸಿದ್ಧ

ಹುಬ್ಬಳ್ಳಿ: ಉತ್ತಮ ಜೀವನಮಟ್ಟ, ಆರ್ಥಿಕ ಚೇತರಿಕೆ ಹಾಗೂ ಸುಸ್ಥಿರ ಅಭಿವೃದ್ಧಿಯನ್ನು ಗಮನದಲ್ಲಿ ಇಟ್ಟುಕೊಂಡು ಹುಬ್ಬಳ್ಳಿ- ಧಾರವಾಡ ಅವಳಿ ನಗರದ ಜಿ.ಐ.ಎಸ್ ಆಧಾರಿತ ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗುತ್ತಿದೆ.

ಈ-ಜಿ.ಎ.ಎಸ್ ಖಾಸಗಿ ಕಂಪನಿ ನಗರದಲ್ಲಿ ಸರ್ವೇ ನಡೆಸಿ, ಜನಪ್ರತಿನಿಧಿಗಳು ಹಾಗೂ ನಾಗರಿಕರ ಅಭಿಪ್ರಾಯ ಪಡೆದು 6 ತಿಂಗಳಲ್ಲಿ ಯೋಜನೆಯನ್ನು ರೂಪಿಸಲಿದೆ.

ಈ ಕುರಿತು ನವನಗರದ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ಜರುಗಿಸಲಾಯಿತು.

ಕೇಂದ್ರ ಸರ್ಕಾರದಿಂದ ಪ್ರಯೋಜಿತವಾದ ಅಮೃತ್ ಯೋಜನೆಯ ಅನುಸಾರ ಅವಳಿ ನಗರದ ಜಿ.ಐ.ಎಸ್ ಆಧಾರಿತ ಮಾಸ್ಟರ್ ಪ್ಲಾನ್ ಮಾಡುವುದು ಕಡ್ಡಾಯವಾಗಿದೆ.

ಜನಗಣತಿ ಆಧರಿಸಿ ಆಧರಿಸಿ ಅವಳಿ ನಗರ ಮುಂದಿನ ದಿನಗಳಲ್ಲಿ ಮೆಟ್ರೋಪಾಲಿಟನ್ ನಗರದ ದರ್ಜೆಯನ್ನು ಪಡೆಯಲಿದೆ.

ಕಳೆದ 10 ವರ್ಷಗಳಲ್ಲಿ ನಗರದ ಬೆಳವಣಿಗೆ ದರ ಶೇಕಡಾ 20 ರಷ್ಟಿದೆ. ಇದು ಮಧ್ಯಮ ಮಟ್ಟದ ನಗರದ ಬೆಳವಣಿಗೆ ಸೂಚಿಸುತ್ತದೆ.

ರಾಷ್ಟ್ರೀಯ ಮಾನದಂಡದ ಪ್ರಕಾರ ಪ್ರತಿದಿನ ಒಬ್ಬ ವ್ಯಕ್ತಿಗೆ ಸರಬರಾಜು ಮಾಡಬೇಕಾದ ನೀರಿನ ಪ್ರಮಾಣ 110 ಲೀಟರ್. ಅವಳಿ ನಗರದಲ್ಲಿ ಈ ಪ್ರಮಾಣ 78 ಲೀಟರ್ ನಷ್ಟಿದೆ.

ಕುಡಿಯುವ ನೀರು, ಯುಜಿಡಿ, ಘನ ತ್ಯಾಜ್ಯ ನಿರ್ವಹಣೆ, ಹಸರೀಕರಣ ವನ್ನು ಗಮನದಲ್ಲಿ ಇಟ್ಟುಕೊಂಡು ಮಾಸ್ಟರ್ ಪ್ಲಾನ್ ರೂಪಿಸಲಾಗುವುದು.

ಸ್ಮಾರ್ಟ್ ಸಿ.ಟಿ., ಪಿ.ಎಂ.ಆವಾಸ್ ಸೇರಿದಂತೆ ಹಲವು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳು ಸಹ ನಗರದಲ್ಲಿ ಅನುಷ್ಠಾನವಾಗುತ್ತಿವೆ.

ಮಾಸ್ಟರ್ ಪ್ಲಾನ್ ಸಿದ್ದಪಡಿಸಿ ಹುಡಾ ಮೂಲಕ ಸರ್ಕಾರದ ಅನುಮೋದಗೆ ಕಳುಹಿಸಿಕೊಡಲಾಗುವುದು.

ಈ ಜಿ.ಐ.ಎಸ್ ಸಂಸ್ಥೆಯ ನಗರ ಯೋಜನಾ ಸಲಹೆಗಾರ ನಾರಾಯಣ ಶಾಸ್ತ್ರಿ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು.

Edited By : Nirmala Aralikatti
Kshetra Samachara

Kshetra Samachara

13/11/2020 04:15 pm

Cinque Terre

15.43 K

Cinque Terre

2

ಸಂಬಂಧಿತ ಸುದ್ದಿ