ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಐಸ್‌ಕ್ರೀಂ ಶೇಖರಣಾ ಗೋದಾಮಿಗೆ ಬೆಂಕಿ

ಧಾರವಾಡ: ಧಾರವಾಡ ನಗರದ ಮಾಳಾಪುರ ವ್ಯಾಪ್ತಿಯಲ್ಲಿರುವ ಶಿವಾಂಗ್ ಎಂಟರ್‌ಪ್ರೈಸಿಸ್ ಹೆಸರಿನ ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್ ಕಂಪನಿಯ ಆದಿತ್ಯ ಐಸ್‌ಕ್ರೀಂ ಶೇಖರಣಾ ಗೋದಾಮಿಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಶುಕ್ರವಾರ ನಡೆದಿದೆ.

ಕಿಶೋರಕುಮಾರ ಪಾಟೀಲ ಎಂಬವರಿಗೆ ಸೇರಿದ ಕೋಲ್ಡ್‌ ಸ್ಟೋರೇಜ್ ಗೋದಾಮಿಗೆ ಆಕಸ್ಮಿಕ ಬೆಂಕಿ ಹತ್ತಿದ್ದು, ಕಂಪ್ಯೂಟರ್, ಲ್ಯಾಪ್‌ಟಾಪ್, ದ್ವಿಚಕ್ರವಾಹನ, ಸ್ಟೀಲ್ ಕಪಾಟ ಸೇರಿದಂತೆ 30ರಿಂದ 35 ಲಕ್ಷ ರೂ. ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಅಗ್ನಿಶಾಮಕ ದಳವು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದರು.

Edited By : Vijay Kumar
Kshetra Samachara

Kshetra Samachara

06/11/2020 10:56 pm

Cinque Terre

14.97 K

Cinque Terre

1

ಸಂಬಂಧಿತ ಸುದ್ದಿ