ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅವಳಿ ನಗರದ ಜನರಿಗೆ ರೈಲ್ವೆ ಇಲಾಖೆಯಿಂದ ಗುಡ್‌ ನ್ಯೂಸ್

ಧಾರವಾಡ: ಉಣಕಲ್- ಧಾರವಾಡ ನಡುವಿನ ಜೋಡಿ ಹಳಿ ಮಾರ್ಗದ ಕಾಮಗಾರಿ ಪೂರ್ಣಗೊಂಡಿದ್ದು, ರೈಲ್ವೆ ಸುರಕ್ಷತಾ ಆಯುಕ್ತರು ಮಾರ್ಗದ ಪರಿಶೀಲನೆ ನಡೆಸಿದ್ದಾರೆ.

ಆಯುಕ್ತರು ಒಪ್ಪಿಗೆ ನೀಡಿದ ಬಳಿಕ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗಲಿದೆ. ಈ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭವಾದರೆ ಹುಬ್ಬಳ್ಳಿ-ಧಾರವಾಡ ನಡುವಿನ ರೈಲು ಸಂಚಾರದ ಅವಧಿ ಕಡಿಮೆಯಾಗಲಿದೆ.

ಹೊಸಪೇಟೆ ಮತ್ತು ಗೋವಾ ವಾಸ್ಕೋ ನಡುವಿನ ಜೋಡಿ ಹಳಿ ಕಾಮಗಾರಿಯ ಭಾಗವಾಗಿ ಈ ಮಾರ್ಗವನ್ನು ಜೋಡಿಹಳಿಯಾಗಿ ಮಾಡಲಾಗುತ್ತಿದೆ. ಇದರಿಂದಾಗಿ ಮತ್ತೊಂದು ರೈಲು ಬಂದಾಗ ಕ್ರಾಸಿಂಗ್‌ಗಾಗಿ ಕಾಯುವುದು ತಪ್ಪಲಿದೆ.

Edited By : Vijay Kumar
Kshetra Samachara

Kshetra Samachara

15/10/2020 05:14 pm

Cinque Terre

22.23 K

Cinque Terre

9

ಸಂಬಂಧಿತ ಸುದ್ದಿ