ನವಲಗುಂದ : ಸುರಿದ ಬಾರಿ ಮಳೆಗೆ ನವಲಗುಂದ ಭಾಗದಲ್ಲಿ ಹರಿಯುವ ತುಪ್ಪರಿಹಳ್ಳ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ತನ್ನ ಹರಿವಿನಲ್ಲಿರುವ ಎಲ್ಲಾ ಕಿರು ಸೇತುವೆಗಳನ್ನು ನುಂಗಿ ಹಾಕಿದೆ. ಇದರ ಪರಿಣಾಮ ಅದೆಷ್ಟೋ ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ.
ನವಲಗುಂದ ತಾಲ್ಲೂಕಿನ ಶಿರಕೋಳ-ಹಣಸಿ ಮಾರ್ಗದಲ್ಲಿರುವ ಕಿರು ಸೇತುವೆ ಸಂಪೂರ್ಣ ನೀರಿನಲ್ಲಿ ಮುಳುಗಡೆಯಾಗಿದ್ದು, ಜನ ಸಂಚಾರ ಹಾಗೂ ವಾಹನ ಸಂಚಾರಕ್ಕೆ ಬ್ರೇಕ್ ಬಿದ್ದಂತಾಗಿ ರೈತಾಪಿ ವರ್ಗ ಹಾಗೂ ಕೆಲಸ ಕಾರ್ಯಗಳಿಗೆ ತೆರಳುವ ಜನರ ಪರದಾಟ ಹೆಚ್ಚಾಗಿದೆ.
Kshetra Samachara
11/10/2022 11:56 am