ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಅಳಗವಾಡಿಯಲ್ಲಿ ಪ್ರವಾಹಕ್ಕೆ ಸಿಲುಕಿದ ವ್ಯಕ್ತಿ : ಅಗ್ನಿ ಶಾಮಕ ದಳ ದೌಡು

ನವಲಗುಂದ : ನವಲಗುಂದ ತಾಲ್ಲೂಕಿನಲ್ಲಿ ಸುರಿದ ಮಳೆಗೆ ತುಪ್ಪರಿಹಳ್ಳ ಸಂಪೂರ್ಣ ತುಂಬಿ ಅಕ್ಕ ಪಕ್ಕದ ಪ್ರದೇಶಗಳಲ್ಲಿ ಹರಿಯುತ್ತಿದೆ. ಈ ಹಿನ್ನೆಲೆ ನವಲಗುಂದ ತಾಲ್ಲೂಕಿನ ಅಳಗವಾಡಿ ಗ್ರಾಮದ ಹೊರ ವಲಯದಲ್ಲಿನ ತುಪ್ಪರಿ ಹಳ್ಳದ ಸಮೀಪದಲ್ಲೇ ಶೆಡ್ ನಲ್ಲಿ ವಾಸವಿದ್ದ ವ್ಯಕ್ತಿಯೋರ್ವ ಪ್ರವಾಹಕ್ಕೆ ಸಿಲುಕಿದ್ದಾನೆ.

ತುಪ್ಪರಿ ಹಳ್ಳದ ರುದ್ರನರ್ತನಕ್ಕೆ ಈಗ ವ್ಯಕ್ತಿ ಸಿಲುಕಿದ್ದು, ವ್ಯಕ್ತಿಯು ಅಳಗವಾಡಿ ಗ್ರಾಮದ ನಿವಾಸಿ ಸೋಮಪ್ಪ ರಂಗಣ್ಣನವರ ಎನ್ನಲಾಗಿದೆ. ಇನ್ನು ಪ್ರವಾಹದ ನೀರು ಹೆಚ್ಚುತ್ತಲೇ ಶೆಡ್ ನ ಪಕ್ಕದಲ್ಲೇ ಇರುವ ಹಳೆಯ ಬಾವಿಯೊಂದರ ಮೇಲೆ ಏರಿ ಕೂತಿದ್ದಾನೆ.

ವಿಷಯ ತಿಳಿಯುತ್ತಲೇ ಗ್ರಾಮಸ್ಥರು ನವಲಗುಂದ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ತಹಶೀಲ್ದಾರ್ ಅನೀಲ ಬಡಿಗೇರ, ಪೊಲೀಸರು ಹಾಗೂ ಅಗ್ನಿ ಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಹೊರಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

11/10/2022 10:16 am

Cinque Terre

69.42 K

Cinque Terre

1

ಸಂಬಂಧಿತ ಸುದ್ದಿ