ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನರಗುಂದ: ಜಿದ್ದಿಗೆ ಬಿದ್ದು ಸೆಣಸಾಡಿ ಪ್ರಾಣ ಬಿಟ್ಟ ಉಭಯ ಪ್ರಾಣಿಗಳು: ದೃಶ್ಯ ಪಬ್ಲಿಕ್ ನೆಕ್ಸ್ಟ್ ಗೆ ಲಭ್ಯ

ನರಗುಂದ: ಹಾವು ಹಾಗೂ ನಾಯಿಯೊಂದರ ಸೆಣಸಾಟದಲ್ಲಿ ಎರಡು ಪ್ರಾಣಿಗಳು ಸಾವನ್ನಪ್ಪಿದ ಘಟನೆ ನರಗುಂದ ತಾಲೂಕಿನ ಹದಲಿ ಗ್ರಾಮದಲ್ಲಿ ನಡೆದಿದ್ದು, ದೃಶ್ಯವನ್ನು ಸಾರ್ವಜನಿಕರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದು ಪಬ್ಲಿಕ್ ನೆಕ್ಸ್ಟ್ ಮಾಧ್ಯಮಕ್ಕೆ ನೀಡಿದ್ದಾರೆ.

ಹೌದು.ಹದಲಿ ಗ್ರಾಮದ ಶೇಖಪ್ಪ ಚಲವಾದಿ ಅವರ ಹೊಲದಲ್ಲಿ ಘಟನೆ ನಡೆದಿದ್ದು, ಹಾವು-ನಾಯಿ ಸೆಣಸಾಟ ನೋಡುಗರ ರೋಮಗಳನ್ನು ನೆಟ್ಟಗಾಗುವಂತೆ ಮಾಡಿವೆ.

ಇನ್ನೂ ಹಾವು ಮತ್ತು ನಾಯಿ ಎರಡು ಸಾವನ್ನಪ್ಪಿದ್ದು, ಘಟನೆ ಕಂಡ ಶೇಖಪ್ಪ ಹಾಗೂ ಗ್ರಾಮಸ್ಥರು ಕಾದಾಟ ಬಿಡಿಸಲು ಮುಂದಾದಾಗ ಹಾವು ಬುಸುಗುಟ್ಟಿದರೇ, ನಾಯಿ ಗುರ್ರ ಎಂದಿದ್ದು, ಬಿಡಿಸಲು ಪ್ರಯತ್ನಿಸಿದ್ರೂ ಕೂಡ ಜಿದ್ದಿಗೆ ಬಿದ್ದಂತೆ ಕಾದಾಡಿ ಉಭಯ ಪ್ರಾಣಿಗಳು ಸಾವನ್ನಪ್ಪಿದವು.

ತಕ್ಷಣ ರೈತ ಶೇಖಪ್ಪ ವೈದ್ಯರನ್ನು ಕರೆ ತಂದು ನಾಯಿ ಜೀವ ಉಳಿಸಲು ಪ್ರಯತ್ನಿಸಿದ್ರೂ ಅಷ್ಟೊತ್ತಿಗಾಗಲೇ ನಾಯಿ ಮೃತಪಟ್ಟಿತ್ತು

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

18/06/2022 09:05 am

Cinque Terre

64.02 K

Cinque Terre

1

ಸಂಬಂಧಿತ ಸುದ್ದಿ