ಧಾರವಾಡ: ಪೇಡಾನಗರಿಯಲ್ಲಿ ಮತ್ತೆ ವರುಣ ಆರ್ಭಟ ಹೆಚ್ಚಾಗಿದ್ದು, ಈ ಮಳೆರಾಯನ ಅವಾಂತರಕ್ಕೆ ಧಾರವಾಡ ನಗರದ ಭಾವಿಕಟ್ಟಿ ಪ್ಲಾಟ್ ಸಂಪೂರ್ಣ ಜಲಾವೃತಗೊಂಡಿದೆ.
ಸತತವಾಗಿ ಮೂರ ದಿನದಿಂದ ಸುರಿಯುತ್ತಿರುವ ಧಾರಕಾರವಾದ ಮಳೆಗೆ ಧಾರವಾಡ ಜನತೆ ಅಕ್ಷರಶಃ ತತ್ತರಿಸಿದ್ದಾರೆ. ಕೆಲವು ಪ್ರಮುಖ ರಸ್ತೆಗಳಲ್ಲಿ ನೀರು ಹೋಗಲು ಚರಂಡಿ ವ್ಯವಸ್ಥೆ ಇಲ್ಲದೆ ನೀರು ರಸ್ತೆ ಮೇಲೆ ನಿಂತು ವಾಹನ ಸವಾರರು ಪರದಾಡುತ್ತಿದ್ದಾರೆ.
ಅದರಂತೆ ಧಾರವಾಡದ ಭಾವಿಕಟ್ಟಿ ಪ್ಲಾಟ್ ನಲ್ಲಿ ಮಳೆರಾಯನ ಅವಾಂತರಕ್ಕೆ ಮನೆ ಒಳಗಡೆ ನೀರು ನುಗ್ಗಿ ಸಾಮಾಗ್ರಿಗಳು ಸಂಪೂರ್ಣ ನೀರಿನಲ್ಲಿ ನಿಂತಿವೆ. ಇಡೀ ಮನೆ ಕೆರೆಯಂತೆ ಬಾಸವಾಗುತ್ತಿದೆ. ಇನ್ನು ಅಡುಗೆ ಸಾಮಾಗ್ರಿಗಳು ನೀರಿನಲ್ಲಿ ಮೀನುಗಳ ತರಾ ತೆಲುತ್ತಿವೆ. ವರುಣನ ಅಬ್ಬರ ನೋಡುತ್ತಿದರೇ ಹಾನಿಯಾದ ಮನೆಯವರು ವರುಣ ಯಾವಾಗ ಆರ್ಭಟ ಕಡಿಮೆ ಮಾಡುತ್ತಾನೆ ಎಂಬುವುದನ್ನು ಕಾಯುತ್ತಿದ್ದಾರೆ.
ಧಾರವಾಡದ ಭಾವಿಕಟ್ಟಿ ಪ್ಲಾಟ್ ನಲ್ಲಿ ಸರಿಯಾಗಿ ನೀರು ಹೋಗಲು ಚರಂಡಿ ವ್ಯವಸ್ಥೆ ಇಲ್ಲದೆ ಅಲ್ಲಿರುವ ಜನತೆ ಚರಂಡಿ ನಿರ್ಮಾಣಕ್ಕೆ ಅಧಿಕಾರಿಗಳ ಗಮನಕ್ಕೂ ತಂದರು, ಪ್ರಯೋಜನ ಆಗಿಲ್ಲ. ಚರಂಡಿ ಇದಿದ್ದರೆ ಮನೆಯೊಳಗೆ ನೀರು ನುಗ್ಗುತಿರಲ್ಲಿಲ್ಲ. ಇಂತಹ ಘಟನೆಗೆ ಅಧಿಕಾರಿಗಳ ನಿರ್ಲಕ್ಷ್ಯತನವೆ ಕಾರಣ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
Kshetra Samachara
20/05/2022 11:07 pm