ಕುಂದಗೋಳ : ಗೂಡ್ಸ್ ವಾಹನದ ಮೂಲಕ ಲಕ್ಷೇಶ್ವರ ಪಟ್ಟಣಕ್ಕೆ ತೆರಳಿ ಪುನಃ ಮರಳುವ ವೇಳೆ ಚಾಕಲಬ್ಬಿ ಗ್ರಾಮದ ಗೂಗಿ ಹಳ್ಳದ ಪ್ರವಾಹದಲ್ಲಿ ಸಿಲುಕಿದ ನಾಲ್ವರನ್ನು ಕುಂದಗೋಳ ತಾಲೂಕ ಆಡಳಿತ ರಕ್ಷಣೆ ಮಾಡಿದೆ.
ಗುರುವಾರ ರಾತ್ರಿ 9 ಗಂಟೆಯ ಸಮಯ ಲಕ್ಷ್ಮೇಶ್ವರಕ್ಕೆ 407 ವಾಹನದ ಮೂಲಕ ಸ್ವಸ್ತಿಕ್ ರವಾ ವಿತರಣೆ ಮಾಡಿ, ಮರಳಿ ಸಂಶಿ ಚಾಕಲಬ್ಬಿ ಮಾರ್ಗವಾಗಿ ಬರುವಾಗ ಗೂಗಿ ಹಳ್ಳದ ಪ್ರವಾಹಕ್ಕೆ ಸಿಲುಕಿದ್ದ ಬಗ್ಗೆ ತಕ್ಷಣ ಪೊಲೀಸ್ ಹಾಗೂ ತಹಶೀಲ್ದಾರರಿಗೆ ಮಾಹಿತಿ ನೀಡಿದ್ದಾರೆ.
ಈ ವೇಳೆ ಅಗ್ನಿಶಾಮಕ ದಳ ಹಾಗೂ ಕಂದಾಯ ನಿರೀಕ್ಷಕರು ಗ್ರಾಮ ಲೆಕ್ಕಾಧಿಕಾರಿಗಳ ನೇತೃತ್ವದಲ್ಲಿ ಗ್ರಾಮಸ್ಥರ ಸಹಕಾರ ಪಡೆದು ವಾಹನಗಳಿಗೆ ಹಗ್ಗ ಕಟ್ಟಿ, ಅಭಿಷೇಕ ಮೊರಬದ, ಸಿದ್ಧಪ್ಪ ಮೊರಬದ, ಮಂಜುನಾಥ ಭಗವತಿ, ಶರಣಪ್ಪ ಲಕ್ಕುಂಡಿ ಎಂಬ ನಾಲ್ವರನ್ನು ರಕ್ಷಣೆ ಮಾಡಲಾಗಿದೆ.
ರಾತ್ರಿ ಪ್ರವಾಹದಲ್ಲಿ ಸಿಲುಕಿದ ನಾಲ್ವರು ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಗ್ರಾಮದವರು ಎಂದು ತಿಳಿದು ಬಂದಿದೆ.
Kshetra Samachara
20/05/2022 12:35 pm