ಧಾರವಾಡ: ಧಾರವಾಡ ತಾಲೂಕಿನ ಲಕಮಾಪುರ ಗ್ರಾಮದ ಮಾರುತಿ ಗಡ್ಡದ ಎಂಬುವವರ ಮನೆ ಬಾಗಿಲಿನಲ್ಲಿ ಜೋಡಿ ನಾಗರಹಾವುಗಳು ಕಾಣಿಸಿಕೊಂಡು ಮನೆಯವರನ್ನು ಕೆಲಕಾಲ ಆತಂಕಕ್ಕೀಡು ಮಾಡಿವೆ.
ಜೋಡಿ ನಾಗರಹಾವುಗಳನ್ನು ಕಂಡು ಮನೆಯವರು ಒಂದು ಕ್ಷಣ ಹೌಹಾರಿದ್ದಾರೆ. ನಾಗರಹಾವುಗಳು ಎಲ್ಲಿಯೂ ಹೋಗದಂತೆ ನೋಡಿಕೊಂಡ ಮನೆಯವರು ಕೂಡಲೇ ಸ್ನೇಕ್ ಮಂಜು ಅವರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಮಂಜು ಎರಡೂ ಹಾವುಗಳನ್ನು ರಕ್ಷಣೆ ಮಾಡಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟು ಬಂದಿದ್ದಾರೆ. ಮನೆಯಂಗಳಕ್ಕೆ ಬಂದ ಹಾವುಗಳನ್ನು ನೋಡಲು ಗ್ರಾಮಸ್ಥರ ದಂಡೇ ಅಲ್ಲಿ ಸೇರಿತ್ತು.
Kshetra Samachara
13/03/2022 11:38 am