ಧಾರವಾಡ: ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ಇನ್ನೂ ಎರಡು ದಿನ ಮೋಡ ಕವಿದ ವಾತಾವರಣ ಇರಲಿದ್ದು, ಯಾವುದೇ ಹಾನಿಕಾರಕ ಮಳೆಯಾಗುವುದಿಲ್ಲ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಹವಾಮಾನ ಕೇಂದ್ರದ ಮುಖ್ಯಸ್ಥ ಡಾ.ಆರ್.ಎಚ್.ಪಾಟೀಲ ತಿಳಿಸಿದ್ದಾರೆ.
ಉತ್ತರ ಕರ್ನಾಟಕ ಭಾಗದಲ್ಲಿ ಎರಡು ದಿನ ಈ ಮೋಡ ಕವಿದ ವಾತಾವರಣ ಇರಲಿದೆ. ಕಡಲ ತೀರದ ಭಾಗದಲ್ಲಿ ಮಳೆ ಆಗಲಿದೆ. 48 ಗಂಟೆಗಳ ಬಳಿಕ ಪುನಃ ಬಿಸಿಲು ಬರಲಿದೆ. ಡಿ.1 ರ ನಂತರ ಮತ್ತೊಂದು ವಾಯುಭಾರ ಕುಸಿತ ಆಗಲಿದೆ ಎಂದಿದ್ದಾರೆ.
ಅಂಡಮಾನ್, ನಿಕೋಬಾರ್ ಭಾಗದಲ್ಲಿ ಈ ವಾಯುಭಾರ ಕುಸಿತ ಆಗಲಿದೆ. ಅದು ಆಂಧ್ರಪ್ರದೇಶದ ಕಡಲ ಭಾಗದಲ್ಲಿ ಎಫೆಕ್ಟ್ ಉಂಟು ಮಾಡಲಿದೆ. ಆದರೆ, ಅದರಿಂದ ಕರ್ನಾಟಕ ಭಾಗದಲ್ಲಿ ಯಾವುದೇ ಬಾಧೆ ಆಗುವುದಿಲ್ಲ ಎಂದು ಮುನ್ಸೂಚನೆ ನೀಡಿದ್ದಾರೆ.
Kshetra Samachara
29/11/2021 11:45 am