ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಮಳೆಗೆ ಮನೆಯೂ ಹೋಯ್ತು ಬೆಳೆಯೂ ಹೋಯ್ತು

ಧಾರವಾಡ: ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಸುರಿದ ಮಳೆ ರೈತರನ್ನು ಅಕ್ಷರಶಃ ನಿದ್ದೆಗೆಡಿಸಿದೆ. ಒಂದೆಡೆ ಪೀಕುಗಳು ಮಳೆಗೆ ಹಾನಿಗೀಡಾದರೆ, ಮತ್ತೊಂದೆಡೆ ಮನೆಗಳು ನೆಲಕ್ಕುರುಳಿ ಜನರನ್ನು ಸಂಕಷ್ಟಕ್ಕೆ ದೂಡಿದೆ.

ಧಾರವಾಡ ಜಿಲ್ಲೆಯಾದ್ಯಂತ ಅನೇಕ ಮನೆಗಳು ನೆಲಕ್ಕುರುಳಿದ್ದು, ಮನೆ ಕಳೆದುಕೊಂಡವರೆಲ್ಲ ಇದೀಗ ಸರ್ಕಾರದ ಮುಂದೆ ಕೈಚಾಚಬೇಕಾಗಿದೆ.

ಧಾರವಾಡ ತಾಲೂಕಿನ ಮನಸೂರು, ಉಪ್ಪಿನ ಬೆಟಗೇರಿ, ಅಮ್ಮಿನಬಾವಿ ಸೇರಿದಂತೆ ಅನೇಕ ಕಡೆಗಳಲ್ಲಿ ಮನೆಗಳು ನೆಲಕಚ್ಚಿವೆ.

ಮೂರ್ನಾಲ್ಕು ದಿನ ಬಿಟ್ಟೂ ಬಿಡದೇ ಸುರಿದ ಮಳೆ ಬೆಳೆಗಳಿಗೆ ಮಾತ್ರ ನಷ್ಟವನ್ನುಂಟು ಮಾಡಿಲ್ಲ. ಬಡಜನತೆಯ ಪುಟ್ಟ ಗುಡಿಸಲುಗಳನ್ನೂ ಸಹ ಕಿತ್ತುಕೊಂಡಿದ್ದು, ಸರ್ಕಾರ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಮನೆ ಕಳೆದುಕೊಂಡವರಿಗೆ ಪುನರ್ವಸತಿ ಕಲ್ಪಿಸಬೇಕಾಗಿದೆ.

Edited By : Manjunath H D
Kshetra Samachara

Kshetra Samachara

22/11/2021 05:56 pm

Cinque Terre

85.25 K

Cinque Terre

0

ಸಂಬಂಧಿತ ಸುದ್ದಿ