ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ರೈತ ಸಮುದಾಯ ಕಂಗಾಲಾಗಿದ್ದು, ಹತ್ತಿ ಹಾಳಾಗಿ ಹೋಗಿದೆ. ಹೊತ್ತು ಕೂಳಿಗೂ ಆಪತ್ತು ಬಂದಿದೆ.
ಮಳೆರಾಯನ ಆರ್ಭಟಕ್ಕೆ ರೈತ ಕಂಗಾಲಾಗಿದ್ದು, ಕೈಗೆ ಬಂದ ಬೆಳೆ ಸಂಪೂರ್ಣ ನೀರುಪಾಲಾಗಿದೆ. ಸಾಲ ಮಾಡಿ ಬೀಜ ಗೊಬ್ಬರ ಹಾಕಿದ್ದ ರೈತ ಬೆಳೆದ ಬೆಳೆ ಕೈ ಸೇರದೆ ನೀರುಪಾಲಾಗಿದ್ದು, ರೈತ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.
ಇನ್ನೂ ಧಾರವಾಡ ಜಿಲ್ಲೆಯ ಕುಂದಗೋಳ, ಹುಬ್ಬಳ್ಳಿ, ಅಳ್ನಾವರ ಹಾಗೂ ನವಲಗುಂದ ತಾಲೂಕಿನ ಬಹುತೇಕ ಗ್ರಾಮದ ಹೊಲದಲ್ಲಿ ಮಳೆ ನೀರು ನಿಂತಿದ್ದು, ಹೊಲದಲ್ಲಿ ನಿಂತಿರುವ ನೀರನ್ನು ನೋಡಿ ಕಣ್ಣೀರು ಹಾಕುವಂತಾಗಿದೆ.
ನಿರಂತರ ಮಳೆಗೆ ರೈತ ಬೆಳೆದ ಹತ್ತಿ, ಜೋಳ ಸಂಪೂರ್ಣ ನೀರುಪಾಲಾಗಿವೆ. ಕೈಗೆ ಬಂದ ಬೆಳೆ ಮಳೆಗೆ ಹಾನಿ ಆದ ಹಿನ್ನೆಲೆ ರೈತ ಕಂಗಾಲಾಗಿದ್ದಾನೆ.
Kshetra Samachara
20/11/2021 03:33 pm