ಕಲಘಟಗಿ: ತಾಲೂಕಿನ ಗಂಭ್ಯಾಪುರ ಗ್ರಾಮದಲ್ಲಿ ಹುಲಿ ಕಾಣಿಸಿಕೊಂಡಿದೆ ಎಂಬ ವದಂತಿ ಹಿನ್ನಲೆಯಲ್ಲಿ ಅರಣ್ಯ ಇಲಾಖೆಯವರು ಗುರುವಾರ ಬೋನು ಇಟ್ಟಿದ್ದಾರೆ.
ಗಂಭ್ಯಾಪುರ ಗ್ರಾಮದಲ್ಲಿ ಬೂದಪ್ಪ ರಾಮನಿ ಎಂಬುವರ ಹೊಲದಲ್ಲಿ ಹುಲಿ ಸೆರೆ ಮಾಡಲು ಅರಣ್ಯ ಇಲಾಖೆಯ ಸಿಬ್ಬಂದಿ ಬೋನು ಇಟ್ಟಿದ್ದಾರೆ ಎಂದು ಗ್ರಾ ಪಂ ಸದಸ್ಯ ಅಜಿತ್ ರೂಟ್ಟಿ ಮಾಹಿತಿ ನೀಡಿದರು.ಇದು ಹುಲಿ ಅಲ್ಲ ಹೈನಾದ ಹೆಜ್ಜೆ ಗುರುತು ಎಂದು ವಲಯ ಅರಣ್ಯಾಧಿಕಾರಿ ಶ್ರೀಕಾಂತ್ ಪಾಟೀಲ ತಿಳಿಸಿದ್ದಾರೆ.
ಬುಧವಾರ ಸಂಜೆ ಹೊಲದಲ್ಲಿ ಹುಲಿಯನ್ನು ಪ್ರತ್ಯಕ್ಷದರ್ಶಿಗಳು ನೋಡಿ ತಕ್ಷಣ ವಲಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು ಈ ಹಿನ್ನಲೆಯಲ್ಲಿ ಅರಣ್ಯ ಇಲಾಖೆಯಿಂದ ಬೋನು ಇಟ್ಟು ಕಾರ್ಯಾಚರಣೆ ಮಾಡುತ್ತಿದ್ದಾರೆ.
Kshetra Samachara
21/10/2021 09:39 pm