ಅಣ್ಣಿಗೇರಿ: ತಾಲ್ಲೂಕಿನಾದ್ಯಂತ ಸೋಮವಾರ ಸಂಜೆ ಸುರಿದ ಧಾರಾಕಾರ ಮಳೆಯಲ್ಲಿ ಸಿಡಿಲು ಬಡಿದು ರೈತನೋರ್ವ ಸಾವನ್ನಪ್ಪಿದ ಘಟನೆ ನಡೆದಿದೆ.
ತಾಲ್ಲೂಕಿನ ಸೈದಾಪುರ ಗ್ರಾಮದ ಸಂಗಪ್ಪ ಪಕ್ಕಿರಪ್ಪ ವಾರದ (48) ಮೃತ ರೈತ. ಸಂಗಪ್ಪ ಅವರು ತಮ್ಮ ಪತ್ನಿಯೊಂದಿಗೆ ಸಾಯಂಕಾಲ ಹೊಲದಿಂದ ಮನೆಗೆ ಬರುವ ಸಂದರ್ಭದಲ್ಲಿ ಏಕಾಏಕಿ ಎದೆಯ ಭಾಗಕ್ಕೆ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಕುರಿತು ಸ್ಥಳೀಯ ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
11/10/2021 10:03 pm