ನವಲಗುಂದ : ಕಲ್ಲ ನಾಗರ ಕಂಡಡೆ ಹಾಲನೆರೆಯೆಂಬರು ದಿಟದ ನಾಗರ ಕಂಡಡೆ ಕೊಲ್ಲೆಂಬರಯ್ಯಾ.. ಎಂಬ ಬಸವಣ್ಣನವರ ವಚನ ನೆನಪಿಸುವ ಸನ್ನಿವೇಶವಿದು, ತಾಲ್ಲೂಕಿನ ಅಳಗವಾಡಿ ಗ್ರಾಮದ ಹಾಲಪ್ಪ ಬೆವುಂಡಿ ಎಂಬುವವರ ಮನೆಯಲ್ಲಿ ನಾಗರ ಹಾವು ಪ್ರತ್ಯಕ್ಷವಾಗಿದ್ದು, ಮನೆಯಲ್ಲಿ ಕೊಂಚ ಭಯದ ವಾತಾವರಣ ಸೃಷ್ಟಿಯಾಗಿತ್ತು.
ಹೌದು ಇಂದು ಮಹಾಲಯ ಅಮಾವಾಸ್ಯೆಗೆ ಮನೆಯಲ್ಲಿ ನಡೆಯುತ್ತಿದ್ದ ವಿಶೇಷ ಪೂಜೆಗೆ ದರ್ಶನ ನೀಡುವಂತೆ ಆಗಮಿಸಿದ ನಾಗಪ್ಪನನ್ನು ಕಂಡು ಮನೆಯವರು ಕೊಂಚ ಭಯಭೀತರಾಗಿದ್ದರು. ನಂತರ ಉರಗ ರಕ್ಷಕ ಸಂಗಮೇಶ ಅವರನ್ನು ಕರೆಯಿಸಿ, ನಾಗಪ್ಪನಿಗೆ ಹಾನಿಯಾಗದಂತೆ ಗ್ರಾಮದ ಹೊರವಲಯದಲ್ಲಿ ಬಿಟ್ಟರು.
Kshetra Samachara
06/10/2021 09:38 pm