ಅಳ್ನಾವರ: ಅಕಾಲಿಕ ಮಳೆಯಿಂದಾಗಿ ರೈತರ ಜಮೀನು ಹಾಳಾಗುವುದಲ್ಲದೆ, ಸಾಕಷ್ಟು ಪ್ರಮಾಣದಲ್ಲಿ ಹೊಲಗಳಗೆ ನೀರು ನುಗ್ಗಿ ಬೆಳೆ ನಾಶವಾಗಿದ್ದು ಎಲ್ಲರಿಗು ಗೊತ್ತಿರುವ ಸಂಗತಿ.ಇದರ ಬೆನ್ನಲ್ಲೇ ರೈತರು ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ.ಕಾಡು ಪ್ರಾಣಿಗಳ ಹಾವಳಿಯಿಂದ ರೈತರು ನೆಮ್ಮದಿ ಕಳೆದು ಕೊಂಡಿದ್ದಾರೆ.
ಅಳ್ನಾವರ ತಾಲೂಕಿನ ದೊಪೇನಟ್ಟಿ ಗ್ರಾಮದ ಜನರೀಗ ಕಾಡು ಪ್ರಾಣಿಗಳ ದಾಳಿಗೆ ತತ್ತರಿಸಿ ಕಂಗಾಲಾಗಿದ್ದಾರೆ. ದೊಪೇನಟ್ಟಿ ಗ್ರಾಮದ ಜನರು ಸಂಪೂರ್ಣ ಕೃಷಿ ಯನ್ನೇ ನಂಬಿ ಬದುವ ಜನರು.ತುತ್ತು ಅನ್ನಕ್ಕೆ ಜೀವ ತುಂಬುವ ಜಮೀನಿಗೆ ಕಾಡು ಪ್ರಾಣಿಗಳಾದ ಕಾಡು ಹಂದಿ,ಜಿಂಕೆ,ಮಂಗ ಗಳ ಕಾಟಕ್ಕೆ ಸಂಪೂರ್ಣ ತತ್ತರಿಸಿ ಹೋಗಿದ್ದಾರೆ.
ಕಾಡಿನ಼ಂಚಿ ನಲ್ಲಿರುವ ಇವರುಗಳ ಜಮೀನಿಗೆ ಹತ್ತಿ,ಕಬ್ಬು,ಬತ್ತ, ಗೋವಿನಜೋಳ ಬೆಳೆಗಳು ಇದ್ದು,ಕಾಡು ಪ್ರಾಣಿಗಳು ಬೆಳೆಗಳಿಗೆ ನುಗ್ಗಿ ದಾಳಿ ಮಾಡುತ್ತಿವೆ.ಇವು ತಿನ್ನುವುದಕ್ಕಿಂತ ಹಾಳು ಮಾಡುವುದೇ ಹೆಚ್ಚಾಗಿದೆ.ಏನು ಮಾಡಬೇಕು ಎಂದು ದಾರಿ ಕಾಣದೆ ಇಲ್ಲಿನ ರೈತರು ಕಣ್ಣೀರಿನಲ್ಲಿ ಕೈ ತೊಳೆಯುವಂತಾ ಪರಿಸ್ಥಿತಿ ಎದುರಾಗಿದೆ.
ಸಾಲಾ ಸೂಲಾ ಮಾಡೆ ಗೊಬ್ಬರ,ಕಾಳು ಕಡಿ ತಂದ ಹಾಕೇವ್ರಿ ಸರ್,ಹಗಲಿ ಮಂಗ್ಯಾ ರಿ,ರಾತ್ರಿ ಹಂದಿ ಕಾಟ್ ರಿ ಯಲ್ಲಾ ಕಬ್ಬ ತಿಂದ ಹಾಳ ಮಾಡೆ ಹೊಂಟಾವ ರಿ ಸರ್ ಏನ್ ಮಾಡುದ ನಮಗ ತಿಳಿವಾಲ್ತ್ ರಿ.ಅರಣ್ಯ ಇಲಾಖೆಯ ದವರು ನಮಗ ಸ್ವಲ್ಪ ಸಹಾಯ ಮಾಡಬೇಕ್ ರಿ ಎಂದು ದೊಪೇನಟ್ಟಿ ಗ್ರಾಮದಲ್ಲಿ ಜಮೀನು ಹೊಂದಿರುವ ಬಸವರಾಜ ನ ಗೊಳಿದು.
ಕಾಡಿನಂಚಿ ನಲ್ಲಿರುವ ಜಮೀನಿಗೆ ಕಾಡು ಪ್ರಾಣಿಗಳು ನುಗ್ಗುವುದು ಸಾಮಾನ್ಯ.ಆದರೆ ರೈತರು ಯಾವುದೇ ತರಹದ ಭಯ ಪಡುವ ಅಗತ್ಯವಿಲ್ಲ. ನಮ್ಮ ಇಲಾಖೆಯಲ್ಲಿ 'ಶಾಖಾ ಉಪವಲಯ ಅರಣ್ಯಾಧಿಕಾರಿ' ಅಥವಾ 'ಇ ಪರಿಹಾರ' ದ ಮೂಲಕ ಅಪ್ಲಿಕೇಶನ್ ಅನ್ನು ಅಗತ್ಯ ಧಾಖಲೆ ಯೊಂದಿಗೆ ಅರ್ಜಿಯನ್ನು ಸಲ್ಲಿದಲ್ಲಿ,ನಮ್ಮ ಅಧಿಕಾರಗಳು ಅದನ್ನು ಪರಿಶೀಲನೆ ಮಾಡಿ ಬೆಳೆ ಹಾನಿ ಸತ್ಯ ವಾಗಿದ್ದರೆ ರೈತರ ಖಾತೆಗೆ ನೇರವಾಗಿ ಹಣ ಹಾಕುವ ಒಂದು ವ್ಯವಸ್ಥೆ ಮಾಡುತ್ತೇವೆ,ರೈತರು ಆತಂಕ ಪಡುವುದು ಬೇಡ ಎಂದು
ಧಾರವಾಡ ಅರಣ್ಯ ಇಲಾಖೆಯ ವಲಯ ಅಧಿಕಾರಿಗಳಾದ ಆರ್,ಎಸ್ ಉಪ್ಪಾರ ರವರು 'ಪಬ್ಲಿಕ್ ನೆಕ್ಸ್ಟ್' ಗೆ ತಿಳಿಸಿದರು.
ರೈತರಿಗೆ ಆದಷ್ಟು ಬೇಗ ಪರಿಹಾರ ದೊರಕಲಿ.ದೇಶದ ಬೆನ್ನೆಲುಬಾದ ರೈತರು ಆತಂಕದಲ್ಲಿ ಬದುಕುವ ಅನಿವಾರ್ಯ ತೆ ಬರದಿರಲಿ ಎನ್ನುವುದೇ ನಮ್ಮ ಆಶಯ.
-ಮಹಾಂತೇಶ ಪಠಾಣಿ ಪಬ್ಲಿಕ್ ನೆಕ್ಸ್ಟ್ಅ ಳ್ನಾವರ.
Kshetra Samachara
16/08/2021 01:44 pm