ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ನಾಗರ ಅಮವಾಸ್ಯೆ ದಿನವೇ ಮುತ್ತಲ ಗಿಡದಲ್ಲಿ ನಾಗರಹಾವು ಕಂಡ‌ ಜನ

ಕಲಘಟಗಿ: ತಾಲೂಕಿನ‌ ಮಡ್ಕಿಹೊನ್ನಳ್ಳಿ ಗ್ರಾಮದಲ್ಲಿ ನಾಗರ ಅಮವಾಸ್ಯೆ ದಿನವೇ ಮುತ್ತಲ ಗಿಡದಲ್ಲಿ ನಾಗರಹಾವು ಕಂಡು ಬಂದಿದ್ದು ಅದನ್ನು ರಕ್ಷಿಸಲಾಗಿದೆ.

ಭಾನುವಾರ ಗ್ರಾಮದ ಪ್ಲಾಟ್ ಹತ್ತಿರದ ಮೂಮ್ಮಿಗಟ್ಟಿ ಅವರ ಹೊಲದಲ್ಲಿ ಮುಂಗಸಿಯೊಂದಿಗೆ ಕಡಿದಾಡಿ ಭಯಗೊಂಡು ಮುತ್ತಲ‌ ಗಿಡವನ್ನೇರಿ ನಾಗರ ಹಾವು ಕುಳಿತಿತ್ತು.ಕೆಳಗೆ ಮುಂಗಸಿ ಕಾದು‌ಕುಳಿತಿತ್ತು.

ಇದನ್ನು‌ ಕಂಡ ಜನರು ಮುಂಗಸಿ‌ ಓಡಿಸಿ ನಂತರ ಕಲಘಟಗಿ ಪಟ್ಟಣದ ಹಾವು ರಕ್ಷಕ ಸಿದ್ರಾಮ ಬಮ್ಮಿಗಟ್ಟಿ ಅವರಿಗೆ ದೂರವಾಣಿ ಕರೆ ಮಾಡಿದ್ದು,ಹಾವು ರಕ್ಷಕ ಸಿದ್ರಾಮ ಸ್ಥಳಕ್ಕೆ ಆಗಮಿಸಿ ನಾಗರ ಹಾವು ಹಿಡಿದು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.

Edited By : Shivu K
Kshetra Samachara

Kshetra Samachara

08/08/2021 09:53 pm

Cinque Terre

69.64 K

Cinque Terre

1

ಸಂಬಂಧಿತ ಸುದ್ದಿ