ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಬಿಳಿ ಗೂಬೆ (ಬಾರನ್ ಔಲ್) ನ್ನು ರಕ್ಷಿಸಿದ ಪಕ್ಷಿ ಪ್ರಿಯರು

ಹುಬ್ಬಳ್ಳಿ- ಆಧುನಿಕತೆ, ತಂತ್ರಜ್ಞಾನದ ಪರಿಣಾಮದಿಂದಾಗಿ ಪರಿಸರದಲ್ಲಿರುವ ಪ್ರಾಣಿ ಪಕ್ಷಿಗಳು, ಜೀವ ಕಳೆದುಕೊಳ್ಳುತ್ತಿವೆ. ಇಂತಹ ಸಂದರ್ಭದಲ್ಲಿ ವ್ಯಕ್ತಿಯೋರ್ವ ಪ್ರಾಣಾಪಾಯದಲ್ಲಿದ್ದ ಪಕ್ಷಿಯೊಂದರ ಜೀವ ಉಳಿಸಿ ಮಾನವೀಯತೆ ಮೆರೆದಿದ್ದಾರೆ..

ಹೌದು, ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಸಿಂಡಿಕೇಟ್ ಬ್ಯಾಂಕ್ ಹತ್ತಿರ ಕಟ್ಟಡದ ಮೂಲೆಯೊಂದರಲ್ಲಿ ಬೀಳಿ ಗೂಬೆಯ ರೆಕ್ಕೆಗೆ ದಾರ ಸುತ್ತಿಕೊಂಡ ಪರಿಣಾಮ ಹಾರುವುದಕ್ಕಾಗದೆ, ವಿಲ ವಿಲ ಒದ್ದಾಡುತ್ತಿತ್ತು.

ಇದನ್ನು ಕಂಡ ಪಕ್ಷಿಪ್ರಿಯ ಈರಪ್ಪ ನಾಯ್ಕರ್, ತಮ್ಮ ಸ್ನೇಹಿತರಾದ ಸಂದೀಪ್ ಮಹಾಲೆ ಹಾಗೂ ಡಾ.ಚಂದ್ರಶೇಖರ ಶಿರೂರ ಸೇರಿಕೊಂಡು, ಆ ಪಕ್ಷಿಯನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆಯನ್ನು ನೀಡಿ ಪಕ್ಷಿಯ ಜೀವ ಉಳಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

21/01/2021 02:10 pm

Cinque Terre

59.46 K

Cinque Terre

7

ಸಂಬಂಧಿತ ಸುದ್ದಿ