ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ರಾತ್ರೋ ರಾತ್ರಿ ಸರ್ಕಾರಿ ಕ್ವಾರ್ಟರ್ಸ್ ಒಳಗೆ ಬಂತಪ್ಪೋ ಹಾವು !

ಕುಂದಗೋಳ : ಶುಕ್ರವಾರ ರಾತ್ರಿ ಹನ್ನೊಂದು ಗಂಟೇ ಸುಮಾರಿಗೆ ಕುಂದಗೋಳ ಪಟ್ಟಣದ ಪಿಡಬ್ಲ್ಯೂಡಿ ಕ್ವಾಟ್ರಸ್ ಆವರಣದ ಸಿವಿಲ್ ಆಂಡ್ ಜೆಎಮ್ಎಪ್ಸಿ ನ್ಯಾಯಾಧೀಶ ಪ್ರಭು ಚಹ್ವಾಣ್ ಅವರ ಮನೆಯ ಆವರಣಕ್ಕೆ ಹಾವೂಂದು ನುಗ್ಗಿ ಕುಟುಂಬದವರಲ್ಲದೆ ಅಲ್ಲಿನ ನಿವಾಸಿಗಳಿಗೂ ಆತಂಕ ಸೃಷ್ಟಿಸಿದ್ದು ಭಯಗೊಂಡ ಕ್ವಾರ್ಟರ್ಸ್ ನಿವಾಸಿಗಳು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಬಳಿಕ ವನ್ಯಜೀವಿ ಸಂರಕ್ಷಕ ಅಡಿವೆಪ್ಪ ತಳವಾರ ಆಗಮಿಸಿ ದಾಸರ ಹಾವನ್ನು (ರಸಲ್ ವೈಪರ್) ಹಿಡಿದು ಕಾಡಿಗೆ ಬಿಟ್ಟಿದ್ದು ಕ್ವಾಟ್ರಸ್ ನಿವಾಸಿಗಳು ಸೇರಿದಂತೆ ನ್ಯಾಯಾದೀಶರ ಕುಟುಂಬದ ಭಯ ದೂರವಾಗಿದೆ ತಂಪಾದ ವಾತಾವರಣದ ಕಾರಣ ಹೊರಬಿದ್ದ ಹಾವು ಕ್ವಾಟ್ರಸ್ ಪ್ರವೇಶಿಸಿ ಸ್ಥಳೀಯರಲ್ಲಿ ಭಯ ಹುಟ್ಟಿಸಿದೆ.

Edited By : Manjunath H D
Kshetra Samachara

Kshetra Samachara

10/10/2020 01:32 pm

Cinque Terre

25.2 K

Cinque Terre

3

ಸಂಬಂಧಿತ ಸುದ್ದಿ