ನಗರದಲ್ಲಿ ಕಳೆದ ಎರಡು ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿದೆ. ಇದರಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಆರ್‌ಜಿಎಸ್ ವಿನೋಭಾನಗರದ ಮನೆ ಒಳಗೆ ಮಳೆ ನೀರು ಮತ್ತು ಚರಂಡಿ ನೀರು ನುಗ್ಗಿದೆ.
ಮಹಾನಗರ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಲ್ಲಿಯ ಜನ ಕಷ್ಟ ಪಡೋವಂತೆ ಆಗಿದೆ. ಒಂದು ಸಣ್ಣ ಮಳೆಯಾದರು ಸಾಕು ಮನೆ ಒಳಗೆ ನೀರು ನುಗ್ಗುತ್ತದೆ. ಇದಕ್ಕೆ ಪರಿಹಾರವಿಲ್ಲವೆ ಎಂದು ಇಲ್ಲಿನ ನಿವಾಸಿಗಳು ಪಾಲಿಕೆ ಅಧಿಕಾರಿಗಳ ವಿರುದ್ಧ ಕಿಡಿಕಾರುತಿದ್ದಾರೆ.
Kshetra Samachara
20/05/2022 01:00 pm