ಇದು ವಿಪರ್ಯಾಸವೋ, ಕಾಕತಾಳಿಯೋ ಗೊತ್ತಿಲ್ಲ. ಆ ಒಂದು ತಾಲ್ಲೂಕಿಗೆ ಕಳೆದ ಇಪ್ಪತ್ತು ದಿನಗಳ ಹಿಂದೆ ವಿಪರೀತ ಮಳೆ ಅಭಾವ, ದೇವರಿಗೆ ಮಳೆಗಾಗಿ ಸಲ್ಲದ ಪೂಜೆ ಇಲ್ಲಾ, ಪ್ರಾರ್ಥನೆ ಇಲ್ಲಾ.
ಆದ್ರೇ ! ಇದೀಗ ಅದೇ ತಾಲ್ಲೂಕಿನ ರೈತಾಪಿ ಜನ ಮಳೆಯಿಂದ ಬೇಸತ್ತು, ಮಳೆಯಿಂದ ಬೆಳೆ ಕಳೆದುಕೊಳ್ಳುವ ಹಂತಕ್ಕೆ ತಲುಪಿ ಪುನಃ ಶಿವ, ಶಿವಾ ಮಳೆ ನಿಲ್ಲಿಸು ಎನ್ನುವಷ್ಟು ಮಳೆಯಿಂದ ನೊಂದಿದ್ದಾರೆ.
ಹೌದು ! ಇದೇ ಕುಂದಗೋಳ ತಾಲ್ಲೂಕಿನ ರೈತರು ಮಳೆಯಿಲ್ಲದೇ ಬೆಳೆಗೆ ಟ್ಯಾಂಕರ್ ಮೂಲಕ ನೀರುಣಿಸಿದ್ದರೂ, ಇದೀಗ ಎಲ್ಲೆಡೆ ಸುರಿಯುತ್ತಿರುವ ಧಾರಾಕಾರ ಮಳೆಗೆ ರೈತಾಪಿ ಜನರ ಬದುಕು ಅಕ್ಷರಶಃ ನಲುಗಿ ಹೋಗಿದ್ದು, ಶೇಂಗಾ, ಹತ್ತಿ, ಹೆಸರು, ಜೋಳದ ಬೆಳೆಗಳು ಸಂಪೂರ್ಣ ಜಲಾವೃತ ಆಗಿವೆ.
ಇನ್ನೂ ಹೆಸರು, ಶೇಂಗಾ ಬೆಳೆಯಂತೂ ಈಗಾಗಲೇ ಹಳದಿ ಬಣ್ಣಕ್ಕೆ ತಿರುಗಿ ಕೊಳೆಯುವ ಎಲ್ಲಾ ಮುನ್ಸೂಚನೆ ತೋರುತ್ತಲಿದ್ದು ರೈತನಿಗೆ ಬೆಳೆ ಉಳಿಸಿಕೊಳ್ಳಲು ಪರ್ಯಾಯ ಮಾರ್ಗವೇ ಇಲ್ಲದ ಸ್ಥಿತಿ ಎದುರಾಗಿದೆ.
ಕಳೆದ ಒಂದೂವರೆ ತಿಂಗಳ ಹಿಂದಷ್ಟೇ ಅತಿ ಉತ್ಸಾಹದಿಂದ ಬಿತ್ತನೆ ಮಾಡಿದ ರೈತನ ಮೊಗದಲ್ಲಿ ಅತಿವೃಷ್ಟಿ ನೋವಿನ ಛಾಯೆ ತುಂಬಿ ಮತ್ತೊಮ್ಮೆ ಅನ್ನದಾತ ಬೀಜ, ಗೊಬ್ಬರ, ಆಳು, ಕಾಳು ಭೂಮಿಗೆ ಹಾಕಿ ನಷ್ಟಕ್ಕೆ ಸಿಲಕಿದ್ದು, ಬೆಳೆ ಪರಿಹಾರವನ್ನೇ ಅವಲಂಬಿಸುವ ವ್ಯತ್ಯ ಉಂಟಾಗಿದೆ.
ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
13/07/2022 07:17 pm