ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ:ಆನೆಗಳನ್ನು ಕಾಡಿಗೆ ಅಟ್ಟಲು ಕಾರ್ಯಚರಣೆಗಿಳಿದ ಅರಣ್ಯ ಸಿಬ್ಬಂದ್ಧಿ

ಕಲಘಟಗಿ: ತಾಲೂಕಿನ ಅರಣ್ಯದಂಚಿನ ಬೈಚವಾಡ ಹಾಗೂ ಡಿಂಬವಳ್ಳಿ ಗ್ರಾಮಗಳ ಬಳಿ ಕಾಣಿಸಿಕೊಂಡ ಆನೆಗಳ ಹಿಂಡನ್ನು ಮರಳಿ ಅರಣ್ಯಕ್ಕೆ ಅಟ್ಟಲು ಅರಣ್ಯ ಇಲಾಖೆಯ ಐವತ್ತು ಸಿಬ್ಬಂದಿ ಕಾರ್ಯಾಚರಣೆಯನ್ನು ಬಾನುವಾರ ಪ್ರಾರಂಭಿಸಿದ್ದಾರೆ.

ಶನಿವಾರ ರಾತ್ರಿಯೇ ಅರಣ್ಯದಂಚಿನ ಗ್ರಾಮಗಳ ರೈತರ ಹೊಲಗಳಿಗೆ ಆಹಾರ ಅರಸಿ ಬಂದ ಆನೆಗಳು ಭತ್ತ ಬೆಳೆ ಹಾನಿ ಮಾಡಿವೆ.ಐದು ಆನೆಗಳ ಹಿಂಡು‌ ತಾಲೂಕು ಪ್ರವೇಶ‌ ಮಾಡಿದ ಹಿನ್ನೆಲೆಯಲ್ಲಿ ಕಾರ್ಯಚರಣೆ ಪ್ರಾರಂಬಿಸಲಾಗಿದೆ.ಆನೆಗಳಿಗೆ ಯಾವುದೇ ತೊಂದರೆಯಾಗದಂತೆ ಅರಣ್ಯಕ್ಕೆ ಸಾಗಿಸುವುದು ಬಹು ಸವಾಲಿನ ಕೆಲಸವಾಗಿದೆ.

ಸುಮಾರು 50 ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಆನೆಗಳನ್ನು ಕಾಡಿಗೆ ಅಟ್ಟಲು ಕಾರ್ಯಾಚರಣೆಗೆ ಇಳಿದಿದ್ದಾರೆ ಎಂದು ವಲಯ ಅರಣ್ಯಾಧಿಕಾರಿ ಶ್ರೀಕಾಂತ್ ಪಾಟೀಲ ಪಬ್ಲಿಕ್‌ ‌ನೆಕ್ಸ್ಟ್ ಗೆ ಪ್ರತಿಕ್ರಿಯೆ ‌ನೀಡಿದರು.

Edited By :
Kshetra Samachara

Kshetra Samachara

20/09/2020 08:25 pm

Cinque Terre

25 K

Cinque Terre

0

ಸಂಬಂಧಿತ ಸುದ್ದಿ