ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾಳೆ ಹುಬ್ಬಳ್ಳಿಗೆ ಬರಲಿದ್ದಾರೆ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ

ಹುಬ್ಬಳ್ಳಿ: ವೃಕ್ಷಮಾತೆ ನಾಡೋಜ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರು, ಪರಿಸರ ಸಂರಕ್ಷಣಾ ಕಾರ್ಯಕ್ರಮಕ್ಕೆ ಭಾಗಿಯಾಗಲು ಅಗಸ್ಟ್ 29 ರಂದು ಹುಬ್ಬಳ್ಳಿ ನಗರದ ಪ್ರವಾಸ ಕೈಗೊಂಡಿದ್ದಾರೆಂದು ಭಾರತೀಯ ಅಯ್ಯಪ್ಪ ಸೇವಾ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಿವಪ್ಪ ಬಾರ್ಕಿ ಹೇಳಿದರು.

ಅಂದು ಬೆಳಿಗ್ಗೆ 10 ಕ್ಕೆ ಜೆ.ಕೆ.ಸ್ಕೂಲ್ ಹತ್ತಿರದ ವಸುಂದರಾ ಫೌಂಡೇಶನ್ ಹುಬ್ಬಳ್ಳಿ ವತಿಯಿಂದ ನೆಟ್ಟಿರುವ ಗಿಡಗಳ ಸ್ಥಳಕ್ಕೆ ಭೇಟಿ ನೀಡುವರು. ತದನಂತರ ಬೆಳಿಗ್ಗೆ 11 ಗಂಟೆಗೆ ಗ್ರೀನ್ ಕರ್ನಾಟಕ ಅಸೋಸಿಯೇಷನ್ ಚೇರ್ಮನ್ ಚೆನ್ನು ಹೊಸಮನಿ ಅವರ ಸಹಯೋಗದಲ್ಲಿ ಶವಲಿಂಗಮ್ಮ ಶಂಕರಗೌಡ ಬಾಲನಗೌಡ್ರ ಹಿರಿಯ ಪ್ರಾಥಮಿಕ ಶಾಲೆ ಅಮರಗೋಳ, ಎಪಿಎಂಸಿ ಹುಬ್ಬಳ್ಳಿಯ ಶಾಲೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯೊಂದಿಗೆ ಗಿಡ ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಅಂದು ಮಧ್ಯಾಹ್ನ 12 ಗಂಟೆಗೆ ಸದ್ಗುರು ಸಿದ್ದಾರೂಢ ಸ್ವಾಮೀಜಿಯವರ ಮಠಕ್ಕೆ ಭೇಟಿ ಹಾಗೂ ಸದ್ಗುರುಗಳ ದರ್ಶನ ಪಡೆಯಲಿದ್ದಾರೆ. ಆನಂತರ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮರಳಿ ಹಾಸನ ಜಿಲ್ಲೆಯ ಬಳ್ಳೂರಿಗೆ ವಾಪಾಸ್ ಆಗಲಿದ್ದಾರೆ ಎಂದರು.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

27/08/2022 12:30 pm

Cinque Terre

61.79 K

Cinque Terre

0

ಸಂಬಂಧಿತ ಸುದ್ದಿ