ಕುಂದಗೋಳ: ತಾಲೂಕಿನ ಎಲ್ಲೆಡೆ ಮೊನ್ನೆಯಷ್ಟೇ ಕಳೆದ ಮೂರು ದಿನಗಳ ಕಾಲ ಸತತವಾಗಿ ಸುರಿದ ಮಳೆಯ ರಭಸಕ್ಕೆ ಅದೆಷ್ಟೋ ಮನೆಗಳಿಗೆ ಹಾನಿಯಾಗಿದ್ದು, ನೀರಿನ ಪ್ರವಾಹಕ್ಕೆ ಹಳ್ಳ ಕೊಳ್ಳ ಬ್ರಿಡ್ಜ್ ನೆಲಕ್ಕೆ ಅಪ್ಪಳಿಸಿ ಅಪಾರ ನಷ್ಟ ಉಂಟಾಗಿದೆ. ಈ ನಷ್ಟವನ್ನು ತಾಲೂಕು ಆಡಳಿತ ತಹಶೀಲ್ದಾರ ಅಶೋಕ್ ಶಿಗ್ಗಾಂವಿಯವರ ನೇತೃತ್ವದಲ್ಲಿ ಪರಿಶೀಲನೆ ನಡೆಸಿದ್ದು ಕುಂದಗೋಳ ತಾಲೂಕಿನಲ್ಲಿ 177 ಮನೆಗಳು ಹಾನಿಯಾಗಿವೆ.
ಇದಲ್ಲದೆ ರೈತರ ಜಮೀನಲ್ಲಿಯ ಬೇಸಿಗೆ ಶೇಂಗಾ ಹಾಗೂ ಮುಸುಕಿನ ಜೋಳದ ಬೆಳೆಯ 38 ಹೇಕ್ಟರ್ ಭೂ ಪ್ರದೇಶ ಮಳೆಯಿಂದಾಗಿ ಹಾಳಾಗಿದ್ದು ರೈತರ ಬದುಕು ಮುಂಗಾರು ಆರಂಭಕ್ಕೂ ಮೊದಲೇ ಕಷ್ಟದ ಸುಳಿಗೆ ಸಿಲುಕಿದೆ.
ಈಗಾಗಲೇ ಮನೆ ಬಿದ್ದ ಬಗ್ಗೆ ಆಯಾ ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ನೇತೃತ್ವದಲ್ಲಿ ಮಳೆಗೆ ಹಾಳಾದ ಮನೆಗಳ ಸಮೀಕ್ಷೆ ಕಾರ್ಯ ನಡೆಸಿದ್ದು, ಅದರಂತೆ ರಸ್ತೆ, ಬ್ರಿಡ್ಜ್ ಹಾಳಾಗಿ ವಾಹನ ಸಂಚಾರ ಸ್ಥಗಿತಗೊಂಡ ಸ್ಥಳಗಳನ್ನು ಗುರುತಿಸಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಂದ ಪುನಃ ರಸ್ತೆಗಳ ನಿರ್ಮಾಣ ಕಾಮಗಾರಿ ಆರಂಭಿಸಿದ್ದಾರೆ.
Kshetra Samachara
27/05/2022 05:30 pm