ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮಳೆ ಗಾಳಿಗೆ ಎತ್ತು ಸಾವು: ರೈತ ಕುಟುಂಬಕ್ಕೆ ಸಚಿವ ಮುನೇನಕೊಪ್ಪ ಪರಿಹಾರ ವಿತರಣೆ

ಹುಬ್ಬಳ್ಳಿ: ಇತ್ತೀಚೆಗೆ ಸುರಿದ ಮಳೆಗೆ ಅನಾಹುತ ಸಂಭವಿಸಿದ ಮಂಟೂರ ಗ್ರಾಮಕ್ಕೆ ಕೈಮಗ್ಗ,ಜವಳಿ,ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ಅವರು ಭೇಟಿ ನೀಡಿ, ಮಳೆಗಾಳಿಗೆ ಮನೆಯ ಮೇಲ್ಛಾವಣಿ ಕುಸಿದು ಎತ್ತು ಸಾವಿಗೀಡಾದ ಕುಟುಂಬ ಕಲ್ಲಪ್ಪ ಯಲ್ಲಪ್ಪ ಹೊನ್ನನಾಯ್ಕರ ಅವರಿಗೆ ಪರಿಹಾರ ಧನದ ಚೆಕ್ ವಿತರಿಸಿದರು.

ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ ಪ್ರಕಾಶ ನಾಶಿ, ಮಂಟೂರ ಗ್ರಾಮ ಪಂಚಾಯತಿ ಅಧ್ಯಕ್ಷೆ ಸರೋಜಮ್ಮ ಹಂಚಾಟೆ, ಉಪಾಧ್ಯಕ್ಷ ಮಲ್ಲಪ್ಪ ಹಡಪದ. ಬಸವರಾಜ ಸಿದ್ದಣ್ಣವರ ಬಸವರಾಜ ಜಿರಗಿ ಮಹಮ್ಮದ್ ಮುಲ್ಲಾ, ನೀಲಪ್ಪಗೌಡ್ರ ಪರ್ವತಗೌಡ್ರ, ಶಿವಪ್ಪ ಆಲೂರ, ಮಂಜು ಗುರನಗೌಡ್ರ, ಹನುಮಂತಪ್ಪ ಹಳ್ಯಾಳ,ಶಿವಣ್ಣ ಮಂಟೂರ ಶೆಟ್ಟರ್, ಈರಣ್ಣ ಮಳಗಿ ಮತ್ತಿತರರು ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

29/04/2022 06:16 pm

Cinque Terre

13.23 K

Cinque Terre

2

ಸಂಬಂಧಿತ ಸುದ್ದಿ