ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಮಳೆ ಅಬ್ಬರಕ್ಕೆ 20 ಸಾವಿರ ಹೆಕ್ಟೇರ್ ಬೆಳೆ ಹಾನಿ, 137 ಮನೆಗಳಿಗೆ ಹಾನಿ

ವರುಣನ ಅಟ್ಟಹಾಸಕ್ಕೆ ಧರೆಗುರುಳಿದ ಮನೆಗಳೆಷ್ಟೋ, ಹಾಳಾದ ಬೆಳೆಗಳೆಷ್ಟೋ. ಈ ಲೆಕ್ಕ ಕೇಳಿದ್ರೆ ರೈತಾಪಿ ಜನರ ಕರುಳು ಚುರ್ ಅನ್ನುತ್ತೆ. ಮನೆ ಕಳೆದುಕೊಂಡವರ ಮರುಕ ಕಣ್ಣೀರು ತರಿಸುತ್ತೆ.

ಹೌದು.. ಎಲ್ಲೆಡೆ ಎಡೆಬಿಡದೆ ಸುರಿಯುತ್ತಿರುವ ಮಳೆಯ ಪರಿಣಾಮ ಈಗಾಗಲೇ ಗ್ರಾಮೀಣ ಭಾಗದ ರಸ್ತೆ ಜಲಾವೃತವಾಗಿ ಅದೆಷ್ಟೋ ಬೆಳೆ ಹಾನಿಯಾಗಿದೆ. ಕುಂದಗೋಳ ತಾಲೂಕಿನಲ್ಲಿ ಸೆ.1 ರಿಂದ ಶುರುವಾದ ಮಳೆಗೆ ಕೃಷಿ ಅಧಿಕಾರಿಗಳ ಮಾಹಿತಿ ಪ್ರಕಾರ ಬರೋಬ್ಬರಿ 20 ಸಾವಿರ ಹೆಕ್ಟೇರ್ ಬೆಳೆ ಹಾನಿಯಾಗಿ ಪರಿಹಾರಕ್ಕೆ ದತ್ತಾಂಶ ಸಂಗ್ರಹ ಕಾರ್ಯ ನಡೆದಿದೆ.

ಇದಲ್ಲದೇ ಸೆ.1 ರಿಂದ ಆರಂಭವಾದ ಮಳೆಗೆ ಇತ್ತೀಚೆಗೆ ಕುಂದಗೋಳ ತಾಲೂಕಿನಲ್ಲಿ ಬರೋಬ್ಬರಿ 137 ಮನೆಗಳು ನೆಲ ಕಚ್ಚಿದ್ರೆ, ಅದೆಷ್ಟೋ ಮನೆಗಳಿಗೆ ನೀರು ನುಗ್ಗಿ ಜನಸಾಮಾನ್ಯರ ಬದುಕು ದುಸ್ತರವಾಗಿದೆ.

ಇನ್ನೂ ವರುಣ ಶಾಂತವಾಗದೇ ಅಬ್ಬರಿಸುತ್ತಲೇ ಇದ್ದು, ಮನೆ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ಅಥವಾ ಪರ್ಯಾಯ ವಾಸಕ್ಕೆ ಅವಕಾಶ ಎರಡು ಸಿಕ್ಕಿಲ್ಲ. ಅಲ್ಲದೇ ಒಂದು ಸಲ ಬಿಟ್ಟರೆ ಮತ್ತೆ ಅಧಿಕಾರಿಗಳು ಬೆಳೆ ಹಾನಿ, ಮನೆ ಹಾನಿ ಪ್ರದೇಶಕ್ಕೆ ಭೇಟಿ ಕೊಟ್ಟಿಲ್ಲ ಎಂದು ಜನ ದೂರಿದ್ದಾರೆ.

ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

12/09/2022 01:32 pm

Cinque Terre

84.91 K

Cinque Terre

1

ಸಂಬಂಧಿತ ಸುದ್ದಿ