ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ರಾಮನಕೊಪ್ಪದಲ್ಲಿ ಹೆಚ್ಚಾಯ್ತು ಉಡಗಳ ಹಾವಳಿ !

ಕುಂದಗೋಳ : ಈ ಕಾಡುಗಳ ನಾಶದಿಂದಲೋ, ಆಧುನಿಕತೆ ಪರಿಣಾಮವೋ ನಾವೆಲ್ಲರೂ ಒಂದಿಲ್ಲ ಒಂದು ರೀತಿಯಲ್ಲಿ ಪ್ರಕೃತಿಗೆ ದಕ್ಕೆ ತರುತ್ತಿದ್ದೇವೆ. ಈ ಕಾರಣದಿಂದಲೇ ವನ್ಯ ಜೀವಿಗಳು ಕಾಡನ್ನು ಬಿಟ್ಟು ನಾಡಿಗೆ ನುಗ್ಗಿ ಮಾನವರಲ್ಲಿ ಆತಂಕ ಸೃಷ್ಟಿಸುತ್ತಿವೆ.

ಮೊನ್ನೆಯಷ್ಟೇ ತಾಲೂಕಿನ ರಾಮನಕೊಪ್ಪ ಗ್ರಾಮದ ಕಾಡಸಿದ್ದಪ್ಪಜ್ಜನ ಮಠದ ಆವರಣದಲ್ಲಿ ಉಡವೊಂದು ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಿಸಿತ್ತು,

ಇಂದು ಮತ್ತೊಂದು ಉಡ ರಾಮನಕೊಪ್ಪದ ಗ್ರಾಮಸ್ಥರ ಮನೆಗೆ ನುಗ್ಗಿ ಆತಂಕ ಸೃಷ್ಟಿಸಿದ್ದು ತಕ್ಷಣ ಮನೆ ಬಾಗಿಲು ಹಾಕಿ ಎಲ್ಲರೂ ಹೊರ ಬಂದಿದ್ದಾರೆ.

ಈ ವೇಳೆ ಸ್ಥಳಕ್ಕಾಗಮಿಸಿದ ವನ್ಯ ಜೀವಿಗಳ ಸಂರಕ್ಷಕ ಅಡಿವೆಪ್ಪ ತಳವಾರ ಉಡವನ್ನು ಹಿಡಿದು ಕಾಡಿಗೆ ಬಿಟ್ಟಿದ್ದರು ಜನರಲ್ಲಿನ ಭಯದ ವಾತಾವರಣ ಕಡಿಮೆ ಆಗಿಲ್ಲ. ಈ ಬಗ್ಗೆ ಅಲ್ಲಿನ ಜನ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

16/12/2020 09:58 am

Cinque Terre

31.68 K

Cinque Terre

1

ಸಂಬಂಧಿತ ಸುದ್ದಿ