ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ತಾಲೂಕಿನಲ್ಲಿ ಮತ್ತೆ ಹದಿನಾರು ‌ಆನೆಗಳ ಸಂಚಾರ

ಕಲಘಟಗಿ:ತಾಲೂಕಿನ ಕಂದ್ಲಿ,ದಿಂಬವಳ್ಳಿ,ಮಸಳಿಕಟ್ಟಿ,ಸೂಳಿಕಟ್ಟಿ ಹಾಗೂ ಬೈಚವಾಡ ಗ್ರಾಮಗಳ ಅರಣ್ಯದಂಚಿನ ಪ್ರದೇಶಗಳಲ್ಲಿ ಹದಿನಾರು‌ ಆನೆಗಳು‌ ಇರುವ ಹಿಂಡು ಸಂಚರಿಸುತ್ತಿವೆ.

ಆನೆಗಳು ಕಬ್ಬು,ಭತ್ತವನ್ನು ತಿನ್ನಲು‌ ಅರಣ್ಯದಂಚಿನ ಗ್ರಾಮಗಳ ಬಳಿ ಬರುತ್ತಿವೆ.ಭಾನುವಾರ ರಾತ್ರಿಯಿಂದಲೇ ಆನೆಗಳು ಸಂಚರಿಸುತ್ತಿದ್ದು,ಇವುಗಳನ್ನು‌ ಕಾಡಿನ ಒಳಗೆ ಪ್ರವೇಶ‌ ಮಾಡುವಂತೆ ಅರಣ್ಯ ಇಲಾಖೆಯ ಸಿಬ್ಬಂದಿ ಸತತ ಕಾರ್ಯಾಚರಣೆ ಮಾಡುತ್ತಿದ್ದಾರೆ.

ಹದಿನಾರು ಆನೆಗಳು ಸಂಚರಿಸುತ್ತಿದ್ದು,ಹೊಲಗಳಲ್ಲಿ ರೈತರು ಎಚ್ಚರಿಕೆಯಿಂದ ಇರ ಬೇಕು ಹಾಗೂ ಸಂಜೆ ವೇಳೆ ಒಬ್ಬೊಬ್ಬರಾಗಿ ಓಡಾಡದೇ ಆನೆಗಳು ಕಂಡು‌ ಬಂದಲ್ಲಿ ಅರಣ್ಯ ಇಲಾಖೆಗೆ ತಿಳಿಸುವಂತೆ ವಲಯ ಅರಣ್ಯಾಧಿಕಾರಿ ಶ್ರೀಕಾಂತ ಪಾಟೀಲ

ಸಾರ್ವಜನಿಕರಿಗೆ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

07/12/2020 06:39 pm

Cinque Terre

14.13 K

Cinque Terre

2

ಸಂಬಂಧಿತ ಸುದ್ದಿ