ಹುಬ್ಬಳ್ಳಿ : ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚುತ್ತಿರುವುದರಿಂದ ತೋಟಗಾರಿಕೆ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ.
ಇನ್ನು ಅತಿಯಾದ ಉಷ್ಣಾಂಶದಿಂದ ಹುಬ್ಬಳ್ಳಿ ತಾಲೂಕಿನ ತಿಮ್ಮಸಾಗರದಲ್ಲಿ ಮಾವಿನ ಹೂವು ಉದುರುತ್ತಿದ್ದು, ಮಾವು ಬೆಳೆಗಾರರು ಕಂಗಾಲಾಗಿದ್ದಾರೆ. ಸದ್ಯ ಮಾವು ಹೂ ಬಿಡುವ ಕಾಲ ಆದರೆ ಹೆಚ್ಚಿದ ಉಷ್ಣಾಂಶದಿಂದಾಗಿ ಹೂವು ಉದುರಲಾರಂಭಿಸಿದೆ.
ತಾಲೂಕಿನಲ್ಲಿ ಒಟ್ಟು 3 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆ ಇದ್ದು ಪ್ರಸ್ತುತ ಉಷ್ಣಾಂಶ ಹೆಚ್ಚಿದ್ದರಿಂದ ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆಯುವಂತಾಗಿದೆ.
ಜನವರಿ ಕೊನೆಯ ವಾರದಿಂದ ಮಾವು ಹೂವು ಬಿಡುವ ಕಾಲವಾಗಿದ್ದು, ತೋಟಗಳಲ್ಲಿರುವ ಮರಗಳು ಹೊರಲಾರದಷ್ಟು ಹೂವು ತುಂಬಿಸಿಕೊಂಡಿದ್ದವು. ಮಳೆಯ ಆಧರಿತ ಬೆಳೆ ಕೈಕೊಟ್ಟರೂ ಮಾವು ಕೈ ಹಿಡಿಯಲಿದೆ ಎಂಬ ಆಶಾಭಾವ ರೈತರಲ್ಲಿ ಮೂಡಿತ್ತು. ಆದರೆ ಹೂವು ಕಾಯಿ ಕಟ್ಟುವ ಬದಲು ಬಿಸಿಲಿನ ತಾಪಕಕ್ಕೆ ಗೊಂಚಲಿನಲ್ಲಿಯೇ ಕಪ್ಪು ಬಣ್ಣಕ್ಕೆ ತಿರುಗಿ ಉದುರಿಹೋಗುತ್ತಿವೆ.
Kshetra Samachara
18/02/2022 10:13 am