ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ನೂರಾರು ಎಕರೆ ಜಮೀನಿನಲ್ಲಿನ ಬೆಳೆ ನಾಶ, ಪರಿಹಾರಕ್ಕಾಗಿ ರೈತರ ಆಗ್ರಹ

ನವಲಗುಂದ : ವರುಣನ ಅಟ್ಟಹಾಸಕ್ಕೆ ತಾಲ್ಲೂಕಿನ ಬಹುತೇಕ ಜಮೀನುಗಳು ಜಲಾವೃತಗೊಂಡಿವೆ. ಇದರಿಂದ ಅನ್ನದಾತ ಸಹ ಸಂಕಷ್ಟಕ್ಕೆ ಸಿಲುಕಿ ಪರದಾಟ ನಡೆಸುವಂತಾಗಿದೆ. ಇದೆ ಪರಿಸ್ಥಿತಿಗೆ ಈಗ ನವಲಗುಂದ ತಾಲ್ಲೂಕಿನ ಆರೇಕುರಹಟ್ಟಿ ಗ್ರಾಮದ ಹಲವು ರೈತರು ಸಿಲುಕಿದ್ದಾರೆ.

ತಾವು ಕಷ್ಟಪಟ್ಟು ಬೆಳೆದ ಬೆಳೆ ಕಣ್ಣ ಮುಂದೆಯೇ ಮಳೆರಾಯಣ ಅಟ್ಟಹಾಸಕ್ಕೆ ತುತ್ತಾಗುತ್ತಿರುವುದನ್ನು ನೋಡಿ ರೈತರು ಕಂಗಾಲಾಗಿದ್ದಾರೆ. ತಾಲ್ಲೂಕಿನ ಆರೇಕುರಹಟ್ಟಿ ಗ್ರಾಮದ ಸುಮಾರು 200 ಕ್ಕೂ ಹೆಚ್ಚು ಜಮೀನುಗಳಿಲ್ಲಿ ಬೆಳೆದ ಕಡಲೆ, ಗೋವಿನ ಜೋಳ, ಸೂರ್ಯಪಾನ, ಗೋದಿ, ಜೋಳ ಕುಸುಬೆ ಸಂಪೂರ್ಣ ನಾಶವಾಗಿದೆ. ಇದರಿಂದ ಎಚ್. ಸಿ. ರಂಗರಡ್ಡಿ, ಆನಂದ ಭರಮಗೌಡರ, ಆನಂದ ಹರಿಹರ ಸೇರಿದಂತೆ ಹಲವಾರು ರೈತರು ತಲೆ ಮೇಲೆ ಕೈಹೋತ್ತು ಕೂರುವಂತಾಗಿದೆ. ಈ ಬಗ್ಗೆ ಯಮನೂರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತರು ಅಲಳನ್ನು ತೋಡಿಕೊಂಡಿದ್ದಾರೆ.

Edited By : Manjunath H D
Kshetra Samachara

Kshetra Samachara

26/11/2021 12:14 pm

Cinque Terre

15.32 K

Cinque Terre

2

ಸಂಬಂಧಿತ ಸುದ್ದಿ