ಕುಂದಗೋಳ : ಮಂಗಾರು ಬೆಳೆಗೆ ಎಲ್ಲಿಲ್ಲದಂತೆ ಕಾಡಿದ್ದ ವರುಣದೇವ ಅತಿವೃಷ್ಟಿ ಸೃಷ್ಟಿಸಿ ರೈತನ ಬದುಕನ್ನು ಅಕ್ಷರಶಃ ಸಂಕಷ್ಟಕ್ಕೆ ನೂಕಿದ್ದ. ಸದ್ಯ ಉತ್ತಮ ಫಸಲಿನ ಜೊತೆ ಇಳುವರಿ ಭರವಸೆ ಮೂಡಿಸಿದ್ದ ಹಿಂಗಾರು ಬೆಳೆಯೂ ಮತ್ತೆ ಅದೇ ಹಾದಿ ಹಿಡಿದಿದೆ.
ಕುಂದಗೋಳ ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಈಗಾಗಲೇ ಕಟಾವಿಗೆ ಬಂದಿರುವ ಗೋಧಿ, ಜೋಳ, ಕಡಲೆ, ಕುಸುಬೆ ಹಾಗೂ ಹತ್ತಿ ಬೆಳೆಗಳು ಕಳೆದ ನಾಲ್ಕೈದು ದಿನಗಳಿಂದ ಸುರಿದ ಅಕಾಲಿಕ ಮಳೆಗೆ ನೆಲಕಚ್ಚಿವೆ.
ಈ ಪರಿಣಾಮ ಗೋಧಿ, ಜೋಳದ ಬೆಳೆಗಳು ಕಪ್ಪಾದರೇ, ಕಡಲೆ ಹುಳಿ ತೊಳೆದು ಹೋಗಿದೆ, ಇನ್ನು ಕುಸುಬೆ ಬೆಳೆ ಮತ್ತೆ ಹೂ ಚಾಚಿದೆ, ಹತ್ತಿ ಬೆಳೆ ನೆಲಕ್ಕೆ ಅಪ್ಪಳಿಸಿ ತೊಳೆ ಮಣ್ಣಾಗಿದ್ದು ರೈತಾಪಿ ಕುಲ ಮತ್ತೆ ಆತಂಕದ ಸುಳಿಗೆ ಸಿಲುಕಿ ಪರಿಹಾರಕ್ಕೆ ಅಂಗಲಾಚಿದೆ.
ಒಟ್ಟಾರೆ ಅತಿವೃಷ್ಟಿ ತಪ್ಪಿದರೇ ಅಕಾಲಿಕ ಮಳೆ ಹೊಡೆತಕ್ಕೆ ಜರ್ಜರಿತವಾಗುತ್ತಿರುವ ರೈತ ಕೃಷಿ ಕಾಯಕದಲ್ಲಿ ಮತ್ತಷ್ಟು ನೋವುಂಡಿದ್ದು ಸರ್ಕಾರ ನಮ್ಮೆಡೆಗೆ ಗಮನಿಸಲಿ ಎನ್ನುತ್ತಿದ್ದಾನೆ.
Kshetra Samachara
23/02/2021 01:39 pm