ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಅಣ್ಣಿಗೇರಿ ತಾಲೂಕು ಪ್ರವಾಹ ಪೀಡಿತ ರೈತ ಕಷ್ಟಕ್ಕಿದೆ ಪರಿಹಾರ

ನವಲಗುಂದ : 2020 ರ ಮುಂಗಾರು ಋತುವಿನ ಅಗಸ್ಟ್ ತಿಂಗಳಲ್ಲಿ ರಾಜ್ಯಾದ್ಯಂತ ಸುರಿದ ಭಾರೀ ಪ್ರಮಾಣದ ಮಳೆಯಿಂದ ಉಂಟಾದ ಪ್ರವಾಹದಿಂದಾಗಿ ಅಪಾರ ಪ್ರಮಾಣದ ಸಾರ್ವಜನಿಕ ಆಸ್ತಿಹಾನಿ, ಬೆಳೆಹಾನಿ ಹಾಗೂ ಮೂಲಭೂತ ಸೌಕರ್ಯಗಳು ಹಾನಿಯಾಗಿದ್ದರಿಂದ ಮೊದಲು ರಾಜ್ಯದ 23 ಜಿಲ್ಲೆಗಳ 130 ತಾಲೂಕುಗಳನ್ನು " ಅತೀವೃಷ್ಟಿ / ಪ್ರವಾಹ ಪೀಡಿತ ತಾಲೂಕುಗಳನ್ನಾಗಿ" ಸರ್ಕಾರ ಘೋಷಿಸಿತ್ತು.

ಆದರೆ ಈ ವರದಿಯಲ್ಲಿ ನವಲಗುಂದ ಮತಕ್ಷೇತ್ರದ ಅಣ್ಣಿಗೇರಿ ತಾಲೂಕು ಸೇರ್ಪಡೆಯಾಗಿರಲಿಲ್ಲ, ಸದ್ಯ ಸೆಪ್ಟೆಂಬರ್ ತಿಂಗಳಲ್ಲಿ ಸುರಿದ ಭಾರೀ ಮಳೆಯಿಂದ ಉಂಟಾದ ಪ್ರವಾಹದಿಂದಾಗಿ ನವಲಗುಂದ ಮತಕ್ಷೇತ್ರದಲ್ಲಿಯೂ ಕೂಡ ಅಪಾರ ಪ್ರಮಾಣದ ಸಾರ್ವಜನಿಕ ಆಸ್ತಿಹಾನಿ, ಬೆಳೆಹಾನಿ ಹಾಗೂ ಮೂಲಭೂತ ಸೌಕರ್ಯಗಳು ಹಾನಿಯಾಗಿದ್ದರ ಕುರಿತು ಶಾಸಕ ಶಂಕರಪಾಟೀಲ ಮುನೇನಕೊಪ್ಪ ಸರ್ಕಾರದ ಗಮನಕ್ಕೆ ತಂದಿದ್ದರ ಫಲವಾಗಿ ಇಂದು ಘನ ಸರಕಾರವು ರಾಜ್ಯದ 16 ಜಿಲ್ಲೆಗಳ 43 ತಾಲೂಕುಗಳನ್ನು (ಅಣ್ಣಿಗೇರಿ ತಾಲೂಕು ಸೇರಿದಂತೆ)" ಅತೀವೃಷ್ಟಿ / ಪ್ರವಾಹ ಪೀಡಿತ ತಾಲೂಕುಗಳನ್ನಾಗಿ" ಘೋಷಿಸಿದೆ.

Edited By :
Kshetra Samachara

Kshetra Samachara

06/10/2020 07:16 pm

Cinque Terre

12.99 K

Cinque Terre

0

ಸಂಬಂಧಿತ ಸುದ್ದಿ