ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಸಿಡಿಲಿಗೆ ಕುರಿಗಳ ಮಾರಣಹೋಮ, ಕುರಿಗಾಯಿಗಳಿಗೆ ಗಂಭೀರ ಗಾಯ

ನವಲಗುಂದ : ತಾಲೂಕಿನ ಅಳಗವಾಡಿ ಗ್ರಾಮದ ಹದ್ದಿನಲ್ಲಿ ಬರುವ ಹೊಲದಲ್ಲಿ ಕುರಿ ಕಾಯುತ್ತಿದ್ದ ಕುರಿಗಾಯಿಗಳಿಗೆ ಮತ್ತು ಕುರಿಗಳಿಗೆ ಸಿಡಿಲು ಬಡಿದ ಪರಿಣಾಮ ಕುರಿಗಾಯಿಗಳು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳದಲ್ಲೇ 15 ಕುರಿಗಳು ಮೃತಪಟ್ಟಿವೆ ಎಂದು ತಿಳಿದು ಬಂದಿದೆ.

ತಾಲ್ಲೂಕಿನ ಗೊಬ್ಬರಗುಪ್ಪಿ ಗ್ರಾಮದ ಸಹೋದರರಾದ 18 ವರ್ಷ ವಯಸ್ಸಿನ ದೇವರಾಜ ದ್ಯಾಮಪ್ಪ ಪೂಜಾರ ಹಾಗೂ ಕರಿಯಪ್ಪ ದ್ಯಾಮಪ್ಪ ಪೂಜಾರ ಎಂಬ ಯುವಕರು ಸುರಿಯುತ್ತಿದ್ದ ಬಾರಿ ಮಳೆಯಿಂದ ನೆರವು ಪಡೆಯಲು ಮರದ ಕೆಳಗೆ ಕುರಿಗಳೊಂದಿಗೆ ನಿಂತ ಸಂದರ್ಭದಲ್ಲಿ ಸಿಡಿಲು ಬಡಿದಿದೆ ಎನ್ನಲಾಗಿದೆ.

ಇನ್ನು ದೇವರಾಜ ದ್ಯಾಮಪ್ಪ ಪೂಜಾರ ಎಂಬುವವರಿಗೆ ಗಂಭೀರ ಗಾಯವಾಗಿದ್ದು, ಇಬ್ಬರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

Edited By : Nirmala Aralikatti
Kshetra Samachara

Kshetra Samachara

24/03/2022 09:56 pm

Cinque Terre

27.26 K

Cinque Terre

2

ಸಂಬಂಧಿತ ಸುದ್ದಿ