ಹುಬ್ಬಳ್ಳಿ: ಹುಬ್ಬಳ್ಳಿಯಿಂದ ಧಾರವಾಡಕ್ಕೆ ಹೊರಟಿದ್ದ ಚಿಗರಿ ಬಸ್ ನಿಯಂತ್ರಣ ತಪ್ಪಿ ಬಾರ್ ಅಂಗಡಿಯೊಂದಕ್ಕೆ ನುಗ್ಗಿ ಹಾನಿಯಾದ ಘಟನೆ ನಗರದ. ಭೈರಿದೇವರಕೊಪ್ಪದ ಬಳಿ ರವಿವಾರ ಸಂಜೆ ನಡೆದಿದೆ.
ಹೌದು ಚಿಗರಿ ಬಸ್ ಅತೀ ವೇಗದಿಂದ ಬಂದು ಚಾಲಕನ ನಿಯಂತ್ರಣ ತಪ್ಪಿ ಈ ಘಟನೆ ಸಂಭವಿಸಿದ್ದು, ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕ್ ಗಳು ಜಖಂಗೊಂಡಿದ್ದು, ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿವೆ.
ಧಾರವಾಡದ ಕಡೆಗೆ ಹೊರಟಿದ್ದ ಬಸ್ ಏಕಾಏಕಿ ತನ್ನ ಪಥ ಬಿಟ್ಟು ಬೇರೆ ರಸ್ತೆಗೆ ಬಂದು ಈ ಅವಘಡ ನಡೆದಿದೆ ಎನ್ನಲಾಗಿದೆ. ಈ ಕುರಿತು ಉತ್ತರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Kshetra Samachara
08/12/2024 05:57 pm