ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಕಟಾವಿಗೆ ಬಂದ ಶೇಂಗಾ ಕಣ್ಮುಂದೆಯೇ ನೀರು ಪಾಲು

ಅಣ್ಣಿಗೇರಿ: ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಗದಗ ರಸ್ತೆಯಲ್ಲಿರುವ ಅಶೋಕ ಬೆಟಸೂರ ಎಂಬ ರೈತರ ಹೊಲದಲ್ಲಿ ಕಟಾವಿಗೆ ಬಂದ ಶೇಂಗಾ ನೀರು ಪಾಲಾಗಿದೆ.

ಅಶೋಕ ಬೆಟಸೂರ ಅಷ್ಟೇ ಅಲ್ಲದೆ ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳ ರೈತರು ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೆಣಸಿನಕಾಯಿ, ಹತ್ತಿ, ಶೇಂಗಾ ಬೆಳೆದ ರೈತರ ಕಣ್ಮುಂದೆಯೇ ಬೆಳೆಗಳು ನೀರು ಪಾಲಾಗಿವೆ. ಸರ್ಕಾರ ಈ ಕೂಡಲೇ ಸಂಕಷ್ಟಕ್ಕೆ ಒಳಗಾದ ರೈತರಿಗೆ ಸಹಾಯ ಹಸ್ತ ನೀಡಬೇಕು ಎಂದು ಸ್ಥಳೀಯ ರೈತರು ಪಬ್ಲಿಕ್ ನೆಕ್ಸ್ಟ್ ಮೂಲಕ ಮನವಿ ಮಾಡಿಕೊಂಡಿದ್ದಾರೆ.

Edited By : Vijay Kumar
Kshetra Samachara

Kshetra Samachara

12/10/2020 04:45 pm

Cinque Terre

9.21 K

Cinque Terre

0

ಸಂಬಂಧಿತ ಸುದ್ದಿ