ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : 120 ಸೆಕೆಂಡ್ ಯೋಗದಲ್ಲಿ ವರ್ಲ್ಡ್ ರೆಕಾರ್ಡ್ ; ಬಾಲಕನ ಅಚ್ಚರಿ ಸಾಧನೆ !

ಕುಂದಗೋಳ : ಪಟ್ಟಣದ ಶ್ರೀ ಸದ್ಗುರು ಶಿವಾನಂದ ವಿದ್ಯಾಪೀಠದ ವಿದ್ಯಾರ್ಥಿಗಳು ಅಂದ್ರೆ ಅವರು ಯೋಗ ಸಾಧನೆಗೆ ಹೆಸರುವಾಸಿ. ಈಗಾಗಲೇ ಈ ಶಾಲೆಯಲ್ಲಿ ಕಲಿತ 80ಕ್ಕೂ ಅಧಿಕ ಮಕ್ಕಳು ವಿದೇಶದಲ್ಲಿ ಈಗ ಯೋಗ ಶಿಕ್ಷಕರಾಗಿದ್ದು, ಅದು ಕುಂದಗೋಳಕ್ಕೆ ಹೆಮ್ಮೆಯ ವಿಷಯ.

ಇದೀಗ ಆ ಸಾಲಿನಲ್ಲಿ ಮತ್ತೊಂದು ಬಾಲಕ ಸೇರ್ಪಡೆ ಆಗಿದ್ದಾನೆ. ಹೌದು... ಕುಂದಗೋಳ ತಾಲೂಕಿನ ಪಶುಪತಿಹಾಳ ಗ್ರಾಮದ ಯೋಗೇಶ್ ನಾಗಲಿಂಗಣ್ಣನವರ ಎಂಬ ಈ ಬಡ ಕುಟುಂಬದ ಕುಡಿ ದೇಶವೇ ಮೆಚ್ಚುವ ಸಾಧನೆ ಮಾಡಿದ್ದಾನೆ.

ಯೋಗದ ಮಜಲನ್ನು ಅರಿಯುವುದು ಮತ್ತು ಲೀಲಾಜಾಲವಾಗಿ ಯೋಗ ಮಾಡುವುದೇ ಕಷ್ಟ. 5ನೇ ತರಗತಿಯಿಂದ ಯೋಗ ಕಲಿತ ಈತ ಪ್ರೌಢ ಶಾಲೆ ಹಂತದಲ್ಲೇ ಪ್ರಸಕ್ತ ವರ್ಷ ದಾವಣಗೆರೆಯಲ್ಲಿ ಜುಲೈನಲ್ಲಿ ನಡೆದ 14 ವರ್ಷದ ಒಳಗಿನ ಮಕ್ಕಳ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿ 120 ಸೆಕೆಂಡ್'ಗಳಲ್ಲಿ ವೃಶ್ಚಿಕಾಸನ, ಉತ್ಕಟಾಸನ, ಧನುರಾಸನ‌ ಮತ್ತು ಸರ್ವಾಂಗಾಸನ ಸೇರಿ ಯೋಗದ ಐದು ಅತಿ ಕಷ್ಟದ ಆಸನ ಮಾಡುವ ಮೂಲಕ ನೊಬೆಲ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಮಾಡಿದ್ದಾನೆ!

ನೊಬೆಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಅಷ್ಟೇ ಅಲ್ಲದೆ ಜಿಲ್ಲೆ, ರಾಜ್ಯ, ಅಂತಾರಾಜ್ಯ, ರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿ ಅದೆಷ್ಟೋ ಸನ್ಮಾನ, ಪುರಸ್ಕಾರ, ಪದಕಕ್ಕೆ ಭಾಜನನಾಗಿದ್ದಾನೆ.

ನಿತ್ಯ ಕೂಲಿ ಕಾಯಕ ಮಾಡುತ್ತಾ ಬದುಕಿನ ಬಂಡಿ ನಡೆಸುವ ತಂದೆ ಶಿವಪ್ಪ, ತಾಯಿ ನಿರ್ಮಲಾ ದಂಪತಿ ಮಗನಾದ ಯೋಗೇಶ್ ಯೋಗದ ಪ್ರತಿ ಮಜಲನ್ನು ಅರಿಯುವ, ಅದನ್ನು ಮಾಡುವ ಅಪ್ರತಿಮ ಸಾಧಕ. ಜಲ ನೀತಿ, ವಸ್ತ್ರ ನೀತಿ ಸೇರಿದಂತೆ ಕ್ಲಿಷ್ಟಕರ ಆಸನಗಳಲ್ಲಿ ಈತ ಚಾಣಾಕ್ಷ. ಇಂತಹ ಪ್ರತಿಭೆಗೆ ಪ್ರೋತ್ಸಾಹದ ಅವಶ್ಯಕತೆ ಇದ್ದು ಆಸಕ್ತರು ಈ ಮೊಬೈಲ್ ಸಂಖ್ಯೆಗೆ ಕರೆ ಮಾಡಿ 9353304330 ಸಹಾಯ ನೀಡಬಹುದು.

- ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ

Edited By : Somashekar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

14/09/2022 03:07 pm

Cinque Terre

118.01 K

Cinque Terre

6

ಸಂಬಂಧಿತ ಸುದ್ದಿ