ಪಬ್ಲಿಕ್ ನೆಕ್ಸ್ಟ್ ವಿಶೇಷ- ಈರಣ್ಣ ವಾಲಿಕಾರ
ಹುಬ್ಬಳ್ಳಿ: ಕೃಷಿಗೂ ಸೈ ಕ್ರೀಡೆಗೂ ಸೈ ಎನ್ನುತ್ತ, ತಮ್ಮ 82 ನೇ ಇಳಿ ವಯಸ್ಸಿನಲ್ಲಿ, ಕ್ರೀಡಾಪಟುವಾಗಿ ಸದ್ಯ ವಯೋಮಿತಿ ರನ್ನಿಂಗ್ ದಲ್ಲಿ ಅಂತರಾಷ್ಟ್ರೀಯ ಮಟ್ಟಕ್ಕೆ ಸೆಲೆಕ್ಟ್ ಆಗಿದ್ದಾರೆ. ಅಷ್ಟಕ್ಕೂ ಅವರು ಯಾರು ಅಂತಿರಾ ಈ ಸ್ಟೋರಿ ನೋಡಿ....
ಹೌದು ಹೀಗೆ ಗ್ರೌಂಡ್ ಗೆ ಇಳಿದು ಯುವಕರು ನಾಚುವಂತೆ ರನ್ನಿಂಗ್ ಮಾಡುತ್ತಿರುವ ಇವರು ಹುಬ್ಬಳ್ಳಿಯ ಅಕ್ಕಿ ಹೊಂಡದ ನಿವಾಸಿ ವೀರುಪಾಕ್ಷಗೌಡ ಪಾಟೀಲ್ ಅಂತ. ಮೂಲತಃ ಇವರು ಹುಬ್ಬಳ್ಳಿ ತಾಲ್ಲೂಕಿನ ಅದರಗುಂಚಿ ಗ್ರಾಮದವರು. ಇವರು ತಮ್ಮ 82 ನೇ ಇಳಿ ವಯಸ್ಸಿನಲ್ಲಿ ದಾಖಲೆ ಪ್ರಮಾಣದಲ್ಲಿ ಪದಕಗಳನ್ನು ಬಾಚಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ. ಪ್ರಾನ್ಸ್ ದೇಶದಲ್ಲಿ ನಡೆದ ವಯೋಮಿತಿ ಅಥ್ಲೆಟಿಕ್ಸ್ ರನ್ನಿಂಗ್ ದಲ್ಲಿ ಭಾಗವಹಿಸಿ ಫಸ್ಟ್ ಪ್ರೈಸ್ ಪಡೆದು ಭಾರತ ಕೀರ್ತಿ ಪತಾಕೆ ಹಾರಿಸಿ ತಾಯ್ನಾಡಿಗೆ ಗೌರವ ತಂದಿದ್ದಾರೆ. ಅಷ್ಟೇ ಅಲ್ಲದೆ 2022 ಜೂನ್ ತಿಂಗಳಲ್ಲಿ ಚೆನೈನಲ್ಲಿ ನಡೆದ ನ್ಯಾಷನಲ್ ಲೇವಲ್ ಹಿರಿಯ ನಾಗರಿಕರ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದು. ಫಿನ್ಲ್ಯಾಂಡ್ ದೇಶದಲ್ಲಿ ನಡೆಯುವ ಕ್ರೀಡೆಗೆ ಆಯ್ಕೆಯಾಗಿದ್ದಾರೆ.
ಇನ್ನು ವಿರುಪಾಕ್ಷಪ್ಪಗೌಡನವರು ತಮ್ಮ 82 ನೇ ವಯಸ್ಸಿನಲ್ಲಿ ಹೊಸ ದಾಖಲೆಯ ಅಧ್ಯಾಯವನ್ನೇ ಸೃಷ್ಟಿಸಲು ಹೊರಟಿದ್ದಾರೆ. ತಮ್ಮ ಬಾಲ್ಯದಿಂದಲೇ ಅವರು ಸ್ವಗ್ರಾಮದಿಂದ ಹುಬ್ಬಳ್ಳಿಗೆ ಸೈಕಲ್ ಸವಾರಿ ಮೂಲಕ ಶಾಲೆಗೆ ಬರುತ್ತಿದ್ದ ಹುಮ್ಮಸ್ಸೇ ಇಂದಿಗೂ ಸ್ಪೂರ್ತಿ ಎನ್ನುತ್ತಾರೆ. ಹಿರಿಯ ನಾಗರಿಕರ ಕ್ರೀಡಾಕೂಟದಲ್ಲಿ ಭಾಗವಹಿಸಿ 1500 ಮೀಟರ್ ಓಟ , ಹಾಗೂ 800 ಮೀಟರ್ ಓಟದ ಸ್ಪರ್ಧೆ , ಮತ್ತು 5 ಕೀ ಮಿ ವಾಕಿಂಗ್ ಸ್ಪರ್ಧೆಯಲ್ಲಿ ಕ್ರಮವಾಗಿ ರಾಜ್ಯ, ರಾಷ್ಟ್ರ ಮಟ್ಟದ ಸಾಧನೆ ಮಾಡಿದ್ದಾರೆ. ಇವರ ಒಂದು ಸಾಧನೆಗಳಿಗೆ ಸಂಬಂಧಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ತಮ್ಮ ಇಳಿ ವಯಸ್ಸಿನಲ್ಲಿ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ವೀರುಪಾಕ್ಷಗೌಡರು, ಅದೆಷ್ಟೋ ಯುವಕರಿಗೆ ಮಾದರಿಯಾಗಿದ್ದಾರೆ. ಇನ್ನು ಫಿನ್ಲ್ಯಾಂಡ್ ದೇಶದಲ್ಲಿ ನಡೆಯುವ ಕ್ರೀಡೆಯಲ್ಲಿ ಭಾರತ ಕೀರ್ತಿ ಪತಾಕೆಯನ್ನು ಹಾರಿಸಲಿ ಎನ್ನುವುದೇ ನಮ್ಮೆಲ್ಲರ ಆಶಯ
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ....
Kshetra Samachara
30/08/2022 03:57 pm