ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಠಾಣೆ ಮೆಟ್ಟಿಲೇರಿದ ಮಕ್ಕಳು!; ಪೊಲೀಸ್‌ ಕಾರ್ಯವೈಖರಿ ಅರಿತರು

ಕುಂದಗೋಳ: ಪೊಲೀಸ್ ಠಾಣೆ ಯಾವ ರೀತಿಯಲ್ಲಿರುತ್ತೆ ? ಅಲ್ಲಿ ಯಾವ ಯಾವ ರೀತಿಯ ವಿಭಾಗಗಳಿವೆ ? ದೂರು ಕೊಡೋದು ಹೇಗೆ ? ಜತೆಗೆ ಆರೋಪಿಗಳನ್ನು ಕೂಡಿ ಹಾಕುವ ಸೆಲ್ ನೋಡುವ ಕುತೂಹಲ ಸಾಧಾರಣವಾಗಿ ಎಲ್ಲಾ ವಿದ್ಯಾರ್ಥಿಗಳಲ್ಲಿಯೂ ಇರುತ್ತೆ ಅಲ್ಲವೇ?

ಹೌದು... ಮಕ್ಕಳ ಇಂತಹ ಕುತೂಹಲ ತಿಳಿದೇ ಕುಂದಗೋಳ ತಾಲೂಕಿನ ಚಾಕಲಬ್ಬಿ ಗ್ರಾಮದ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ವಿಠ್ಠಲ ಘಾಟಗೆ ಹಾಗೂ ಗ್ರಾಮಸ್ಥ ಯಲ್ಲಪ್ಪ ಬಾರಕೇರ್ ಪೊಲೀಸ್ ಠಾಣೆಯ ಪರಿಚಯ ಮಾಡಿಸಿದ್ದಾರೆ.

ಇಂದು ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಗೆ ಭೇಟಿ ಮಾಡಿದ ವಿದ್ಯಾರ್ಥಿಗಳು, ತಮ್ಮೂರಿನ ಬಸ್ ಸಮಸ್ಯೆ ಪರಿಹಾರಕ್ಕೆ ಮನವಿ ಸಲ್ಲಿಸಿದರು. ಬಳಿಕ ಪೊಲೀಸ್ ಠಾಣೆಯ ಚಟುವಟಿಕೆ, ನಾನಾ ವಿಭಾಗ, ಆರಕ್ಷಕರ ಕರ್ತವ್ಯ ನಿರ್ವಹಣೆ ಶೈಲಿ ಸೇರಿದಂತೆ ಮುಖ್ಯವಾಗಿ ಆರೋಪಿಗಳನ್ನು ಕೂಡಿ ಹಾಕುವ ಸೆಲ್ ಗೆ ಭೇಟಿ ನೀಡಿದರು. ನಂತರ ಪೊಲೀಸ್‌ ಠಾಣೆಗೆ ಯಾವ ರೀತಿಯಲ್ಲಿ ದೂರು ಸಲ್ಲಿಸುವುದು ಇತ್ಯಾದಿ ಮಾಹಿತಿ ಪಡೆದುಕೊಂಡರು. ಇನ್ನು, ವಿದ್ಯಾರ್ಥಿಗಳಿಗೆ ಆರಕ್ಷಕರು ಸಹ ಉತ್ಸಾಹದಿಂದ ಪೊಲೀಸ್ ಠಾಣೆಯ ಕಾರ್ಯ ಚಟುವಟಿಕೆಗಳನ್ನು ವಿವರವಾಗಿ ತಿಳಿಸಿದರು.

Edited By : Shivu K
Kshetra Samachara

Kshetra Samachara

10/07/2022 10:24 am

Cinque Terre

91.63 K

Cinque Terre

0

ಸಂಬಂಧಿತ ಸುದ್ದಿ