ಕುಂದಗೋಳ : ನಮ್ಮ ವಾರ್ಡ್ ಒಳಗೆ ಅಕ್ರಮ ಸಾರಾಯಿ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ. ಈ ಬಗ್ಗೆ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ ಕೂಡಲೇ ಸಾರಾಯಿ ಮಾರಾಟ ಮಾಡುವವರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅಂಬೇಡ್ಕರ್ ನಗರದ ನಿವಾಸಿಗಳು ಆಗ್ರಹಿಸಿದರು.
ಅವರು ಕುಂದಗೋಳ ಪಟ್ಟಣದ ಅಂಬೇಡ್ಕರ್ ನಗರದಲ್ಲಿ ಎಎಸ್ಐ ಮುತ್ತುರಾಜ ಮಡಿವಾಳರ ಹಾಗೂ ಪೊಲೀಸ್ ಮುಖ್ಯ ಪೇದೆ ಬಿ.ಎಂ.ಕಳ್ಳಿಮನಿ ನೇತೃತ್ವದಲ್ಲಿ ನಡೆದ ಬೀಟ್ ಮಟ್ಟದ ಸಭೆಯಲ್ಲಿ ಸಾರ್ವಜನಿಕರು ಧ್ವನಿ ಎತ್ತಿದರು.ಕೇವಲ ಸಾರಾಯಿ ಮಾರಾಟ ಅಷ್ಟೇ ಅಲ್ಲದೆ ಅಂಬೇಡ್ಕರ್ ನಗರದ ಸಭ್ಯಸ್ಥ ನಾಗರೀಕರ ಮೇಲೆ ಸುಳ್ಳು ಅಪರಾಧ ಮಾತುಗಳು ಕೇಳಿ ಬರುತ್ತಿವೆ. ಈ ತರಹದ ಕೆಲಸಗಳಿಗೆ ಕಡಿವಾಣ ಹಾಕಿ ನಿಜವಾದ ತಪ್ಪಿತಸ್ಥರಿಗೆ ಶಿಕ್ಷೆ ನೀಡಿ ಎಂದರು.
ಈ ಸಭೆಯಲ್ಲಿ ಗುರುನಾಥ್ ಕುಟುಂಬದ, ಮೈಲಾರಿ ಚೂರಿ, ಗುರುನಾಥ ಹಿರೇತನದ, ಬಸವರಾಜ ಬೇವಿನಮರದ ಸೇರಿದಂತೆ ಸ್ಥಳೀಯ ಯುವಕ ಮಂಡಳದ ನಾಗರೀಕರು ಸಾರ್ವಜನಿಕರು ಉಪಸ್ಥಿತರಿದ್ದು ಪೊಲೀಸ್ ಅಧಿಕಾರಿಗಳ ಎದುರು ಸಮಸ್ಯೆ ಬಿಚ್ಚಿಟ್ಟರು.
Kshetra Samachara
23/02/2021 03:51 pm